ತೋನಸನಹಳ್ಳಿಯಲ್ಲಿ ಮಾ. 31ರಂದು ಭವ್ಯ ರಥೋತ್ಸವ: ಬ್ರಹ್ಮಾಂಡ ಗುರೂಜಿ, ನಟಿ ಪ್ರಿಯಾಂಕಾ ಭಾಗಿ

ಕಲಬುರಗಿ,ಮಾ.26: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ತೋನಸನಹಳ್ಳಿ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು ಹಾಗೂ ಸುಲ್ತಾನ್ ಅಹ್ಮದ್ ಶಾಹವಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭವ್ಯ ರಥೋತ್ಸವ ಮತ್ತು ಭವ್ಯ ದೀಪೋತ್ಸವ ಕಾರ್ಯಕ್ರಮವನ್ನು ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಣ್ಣಪ್ಪ ಮಹಾಸ್ವಾಮಿಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31ರಂದು ಸಂಜೆ 7-30 ಗಂಟೆಗೆ ಧರ್ಮ ಸಭೆ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಬ್ರಹ್ಮಾಂಡ ಗುರೂಜಿ ವಹಿಸುವರು. ಅಗ್ನಿಸಾಕ್ಷಿ ಹಾಗೂ ಸತ್ಯಟಿವಿ ಧಾರವಾಹಿಯ ಖ್ಯಾತ ನಟಿ ಪ್ರಿಯಾಂಕಾ ಅವರು ಪಾಲ್ಗೊಳ್ಳುವರು ಎಂದರು.
ಸಾನಿಧ್ಯವನ್ನು ಸೊನ್ನದ ಡಾ. ಶಿವಾನಂದ್ ಮಹಾಸ್ವಾಮೀಜಿ, ಚಿತ್ತಾಪುರದ ಸೋಮಶೇಖರ್ ಶಿವಾಚಾರ್ಯರು, ಯಲಗೋಡದ ಗುರುಲಿಂಗ ಮಹಾಸ್ವಾಮೀಜಿ, ಪೇಠ ಶಿರೂರದ ಸಿದ್ದಲಿಂಗ ಮಹಾಸ್ವಾಮೀಜಿ, ಸೂಗೂರ್(ಕೆ)ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ರಾವೂರಿನ ಸಿದ್ದಲಿಂಗ ಮಹಾಸ್ವಾಮೀಜಿ, ಶ್ರೀನಿವಾಸ್ ಸರಡಗಿಯ ಡಾ. ಅಪ್ಪಾರಾಯ್ ದೇವಿ ಮುತ್ಯಾ, ಮಾಲಗತ್ತಿಯ ಚನ್ನಬಸವ ಶರಣರು, ಮಳಖೇಡದ ಸೈಯದರಾದ ಮುಸ್ತಭಾ ಖಾದ್ರಿ ಸಜ್ಜಾದ್ ನವೀನ್ ಅವರು ವಹಿಸುವರು ಎಂದು ಅವರು ಹೇಳಿದರು.
ಉದ್ಘಾಟನೆಯನ್ನು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಮುಂಬಯಿನ ರಾಜ್ಯ ವಿಧಾನ ಪರಿಷತ್ ಸದಸ್ಯ ರಮೇಶ್ ದಾದಾ ಪಾಟೀಲ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಶಾಸಕ ಬಸವರಾಜ್ ಮತ್ತಿಮೂಡ್ ಅವರು ನೆರವೇರಿಸುವರು. ನೂತನ ಮಹಾದ್ವಾರವನ್ನು ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ಪ್ರಿಯಾಂಕ್ ಖರ್ಗೆ, ರಾಜಕುಮಾರ್ ಪಾಟೀಲ್ ತೆಲ್ಕೂರ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕPಮಕನೂರ್ ಅವರು ಲೋಕಾರ್ಪಣೆ ಮಾಡುವರು ಎಂದು ಅವರು ತಿಳಿಸಿದರು.
ಶಾಸಕರಾದ ಡಾ. ಅಜಯಸಿಂಗ್, ಬಿ.ಜಿ. ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಮುಖಂಡ ಡಾ. ಯೋಗೇಶ್ ಬೆಸ್ತರ್ ಅವರು ಕ್ಯಾಲೆಂಡರ್ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ ಅವರು ವಹಿಸುವರು ಎಂದು ಅವರು ಹೇಳಿದರು.
ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಲಚ್ಚಪ್ಪ ಎಸ್. ಜಮಾದಾರ್, ರಾಮಲಿಂಗ್ ನಾಟೀಕಾರ್, ನಿಂಗಣ್ಣ ಹೂಳಗೋಳಕರ್, ಭೀಮಶಾ ಖನ್ನಾ, ವೈಜನಾಥ್ ಕಟ್ಟಳ್ಳಿ, ಮಹಾದೇವ್ ಬಂದಳ್ಳಿ, ಮಡಿವಾಳಪ್ಪ ನರಿಬೋಳ್ ಮುಂತಾದವರು ಉಪಸ್ಥಿತರಿದ್ದರು.