ತೋತಾಪುರಿ ತೊಟ್ಟಿಗೆ ಕೈ ಹಾಕಿದ ಜಗ್ಗೇಶ್- ಅದಿತಿ

* ಚಿಕ್ಕನೆಟಕುಂಟೆ ಜಿ. ರಮೇಶ್

‘ನೀರ್ ದೋಸೆ’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ವಿಜಯಪ್ರಸಾದ್ ಹಾಗೂ ನಾಯಕ ಜಗ್ಗೇಶ್ ಕಾಂಬಿನೇಷನ್ ‘ತೋತಾಪುರಿ’ ಚಿತ್ರದ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ.

ತೋತಾಪುರಿ ಚಿತ್ರದ ಹಿಂದಿ ಹಾಗೂ ಕನ್ನಡ ಮಿಶ್ರಿತ ಸಾಹಿತ್ಯವಿರುವ ಹಾಡಿಗೆ ವಿಜಯಪ್ರಸಾದ್ ಸಾಹಿತ್ಯ‌ ರಚಿಸಿದ್ದಾರೆ..ಅನೂಪ್ ಸೀಳಿನ್ ರಾಗ ಸಂಯೋಜಿಸಿದ್ದಾರೆ.

ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ವಿಶೇಷ ಸೆಟ್ ನಲ್ಲಿ ರಂಗು ರಂಗಿನ ಸೆ‍ಟ್… ನೂರಾರು ನೃತ್ಯ ಕಲಾವಿದರೊಂದಿಗೆ ನಟ ಜಗ್ಗೇಶ್ ಮತ್ತು ನಟಿ ಅದಿತಿ ಪ್ರಭುದೇವಾ ಹೆಜ್ಜೆ ಹಾಕಿದ ಹಾಡಿನ ಚಿತ್ರೀಕರಣವನ್ನು ನೃತ್ಯ ನಿರ್ದೇಶಕ ಮುರಳಿ ಸಂಯೋಜನೆಲ್ಲಿ ಮೂಡಿ ಬಂದಿದೆ‌

ಹಾಡಿನ ಚಿತ್ರೀಕರಣವನ್ನು ಹಿಂದು-ಮುಸ್ಲಿಂ ಗೆ‍ಟಪ್’ನಲ್ಲಿಯೇ ಶೂಟಿಂಗ್ ಮಾಡುತ್ತಿರುವುದು ವಿಶೇಷ . ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡರೆ ಚಿತ್ರ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.

ಬೆಂಗಳೂರು, ಮೈಸೂರು, ಮಡಿಕೇರಿ, ಕೇರಳ ಸೇರಿದಂತೆ ಸಾಕಷ್ಟು ಸ್ಥಳಗಳಲ್ಲಿ ಚಿತ್ರೀಕರಣವಾಗಿರುವ ಚಿತ್ರ ದಕ್ಷಿಣ ಭಾರತ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡೂ ಭಾಗದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಒಂದೇ ಬಾರಿ ಎರಡೂ ಭಾಗದ ಶೂಟಿಂಗ್ ನಡೆಸಿದ ಕೀರ್ತಿ ‘ತೋತಾಪುರಿ’ಗೆ ಸಲ್ಲುತ್ತದೆ.

150ಕ್ಕೂ ಹೆಚ್ಚಿನ ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.‌ಹಿರಿಯ ನಟ ಜಗ್ಗೇಶ್ ಅವರ ಸಿನಿ ಕೆರಿಯರ್’ನಲ್ಲೇ ಇದೇ ಮೊದಲ ಬಾರಿಗೆ ಎರಡು ಭಾಗದ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಲು ಸದ್ಯದಲ್ಲಿಯೇ ಹಾಜರಾಗಲಿದೆ ‘ತೋತಾಪುರಿ’ ತಂಡ.

ಚಿತ್ರಕ್ಕೆ ಕೆ.ಎ.ಸುರೇಶ್ ‘ತೋತಾಪುರಿ’ಗೆ ಬಂಡವಾಳ ಹಾಕಿದ್ದಾರೆ. ಈ ಚಿತ್ರ ಎರಡು ಭಾಗವಾಗಿ ತೆರೆಕಾಣಲಿದ್ದು, ಮೊದಲ ಭಾಗಕ್ಕೆ ‘ತೊಟ್ಟ್ ಕೀಳ್ಬೇಕಷ್ಟೇ…’ ಎಂಬ ಅಡಿಬರಹವಿದ್ದರೆ, ಎರಡನೇ ಭಾಗಕ್ಕೆ ‘ತೊಟ್ಟ್ ಕಿತ್ತಾಯ್ತು…’ ಎಂಬ ಟ್ಯಾಗ್’ಲೈನ್ ಇದೆ.

ತಾರಾಗಣದ ವಿಷಯದಲ್ಲೂ ಚಿತ್ರ ಸದ್ದು ಮಾಡಿದ್ದು, ಜಗ್ಗೇಶ್, ಅದಿತಿ ಪ್ರಭುದೇವ, ‘ಡಾಲಿ’ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಲಾವಿದರು ಪ್ರಮುಖ ತಾರಾಬಳಗದಲ್ಲಿದ್ದಾರೆ.