ತೋಟದ ಮನೆಗೆ ಬೆಂಕಿ: ದವಸ-ಧಾನ್ಯ ಭಸ್ಮ

ವಿಜಯಪುರ,ಮಾ.30-ತೊಟದ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಮನೆಯಲ್ಲಿದ್ದ ದವಸ-ಧಾನ್ಯ ಸೇರಿ 50 ಸಾವಿರಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಸಿಂದಗಿ ತಾಲ್ಲೂಕಿನ ಕೋರಹಳ್ಳಿಯಲ್ಲಿ ನಡೆದಿದೆ.
ಖಾಜಾಸಾಬ್ ಹುಸೇನಸಾಬ್ ನದಾಫ್ ಎಂಬುವವರಿಗೆ ಸೇರಿದ ತೋಟದ ಮನೆಗೆ ಬೆಂಕಿ ಬಿದ್ದಿದೆ. ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆಲ್ ಮೇಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.