ತೋಟದ ಮನೆಗೆ ಬೆಂಕಿ : ಅಡಕೆ, ಕಾಳುಮೆಣಸು ಬೆಂಕಿಗಾಹುತಿ!

ಶಿವಮೊಗ್ಗ, ಎ. 14: ಜಿಲ್ಲೆಯ ಸಾಗರ ತಾಲೂಕಿನ ಹೆಸರುಬೈಲು ಗ್ರಾಮದಲ್ಲಿ ತೋಟದ ಮನೆಗೆ
ಬೆಂಕಿ ಬಿದ್ದು, ಲಕ್ಷಾಂತರ ರೂ. ಮೌಲ್ಯದ ಅಡಕೆ ಹಾಗೂ ಮೆಣಸಿನಕಾಳು
ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ಹೊಯ್ಸಳ ಎಂಬುವರಿಗೆ ಸೇರಿದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು
80 ಕ್ವಿಂಟಾಲ್ ಅಡಕೆ ಹಾಗೂ 20 ಕ್ವಿಂಟಾಲ್ ಮೆಣಸಿನಕಾಳು ಬೆಂಕಿಗಾಹುತಿಯಾಗಿದೆ ಎಂದು
ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸಾಗರ
ಪಟ್ಟಣದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿ, ಹೆಚ್ಚಿನ
ಅನಾಹುತ ತಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾಜರ್ುನ ಹಕ್ರೆರವರು
ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.