ತೋಟದಲ್ಲಿ ಬೆಂಕಿ ನಂದಿಸಲು ಹೋದ ರೈತ ಸಾವು

fire isolated over black background

ಮಧುಗಿರಿ, ಮಾ. ೨೬- ತಾಲ್ಲೂಕಿನ ಮರಬಳ್ಳಿ ಗ್ರಾಮದ ಸರ್ವೆ ನಂ .೧೪/೦೧ ರ ಜಮೀನಿನ ಬದುವಿನಲ್ಲಿ ಬೆಳೆದಿದ್ದ ಕಳೆಗೆ ಬೆಂಕಿಯನ್ನು ಇಟ್ಟಿದ್ದ ವೇಳೆಯಲ್ಲಿ ಬೆಂಕಿಯು ಪಸರಿಸಿ ಪಕ್ಕದ ಅಡಿಕೆ ತೋಟಕ್ಕೆ ವ್ಯಾಪಿಸುತ್ತಿದ್ದಾಗ ನಂದಿಸಲು ಯತ್ನಿಸಿದ ರೈತನ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ದೊಡ್ಡಪ್ಪ ಚಿಕ್ಕಣ್ಣ ( ೭೦ ) ಎಂಬುವರೇ ಸಾವನ್ನಪ್ಪಿರುವ ದುರ್ದೈವಿ. ಇವರು ತೋಟಕ್ಕೆ ವ್ಯಾಪಿಸಿದ್ದ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಆಗ ಬೆಂಕಿಯು ದೊಡ್ಡಪ್ಪರವರು ತೊಟ್ಟಿದ್ದ ಬಟ್ಟೆಗಳಿಗೆ, ಮೈಕೈಗೆ ಹೊತ್ತಿಕೊಂಡಿದೆ . ಕೂಡಲೇ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿ , ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಮಧುಗಿರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ .