ತೋಟದಲ್ಲಿ ಚಿರತೆ ಕಳೆಬರ ಪತ್ತೆ

ತುರುವೇಕೆರೆ, ನ. ೬- ತೋಟವೊಂದರಲ್ಲಿ ಚಿರತೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗಡಿಭಾಗದ ಸಾದರಹಳ್ಳಿಯಲ್ಲಿ ನಡೆದಿದೆ.
ಸಾದರಹಳ್ಳಿ ಗ್ರಾಮದ ವಾಸಿ ಹುತ್ತದ ಸಿದ್ದಪ್ಪ ಅವರ ತೋಟದಲ್ಲಿ ಸುಮಾರು ೧೮ ವರ್ಷದ ಗಂಡು ಚಿರತೆಯು ಉಬ್ಬಿದ ಸ್ಥಿತಿಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ.ಚಂದ್ರು ಭೇಟಿ ನೀಡಿ ಪರಿಶೀಲಿಸಿ, ಮೃತ ಚಿರತೆಯ ಕಳೇಬರ ಪರಿಶೀಲನೆ ನಡೆಸಿ ಸಹಜ ಸಾವಿನಿಂದ ಸಾವನ್ನಪ್ಪಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರವಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.