ತೋಟದಲ್ಲಿ ಅಡಕೆ ಕಳವು

ಶಿವಮೊಗ್ಗ, ಜ. 10: ಬೇಯಿಸಿ ಒಣಗಲು ಹಾಕಿದ್ದ ಅಡಕೆಯನ್ನು ಕಳವು ಮಾಡಿರುವ ಘಟನೆ ಶಿವಮೊಗ್ಗ  ತಾಲೂಕಿನ ಮೇಲಿನ ಬೇಡರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.ಸುಭಾಷ್ ಎಂಬುವರ ತೋಟದಲ್ಲಿ ಈ ಘಟನೆ ನಡೆದಿದೆ. ಅಡಿಕೆ ಬೇಯಿಸಿ ಕಣದಲ್ಲಿ ಒಣಗಿಸಲು ಹಾಕಿದ್ದ ವೇಳೆ, 150 ಕೆ.ಜಿ. ಅಡಿಕೆಯನ್ನು ಕಳವು ಮಾಡಲಾಗಿದೆ.ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ