ತೋಟಗಾರಿಕೆ ಮೇಳ-2021ಕ್ಕೆ ವಿದ್ಯುಕ್ತ ಚಾಲನೆ

ಬಾಗಲಕೋಟ, ಜ. 3 : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟವು ಕರ್ನಾಟಕ ಸರ್ಕಾರದ ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆಗಳ, ಕರ್ನಾಟಕ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ವಿವಿಧ ಹಣಕಾಸು ಸಂಸ್ಥೆಗಳ ಪ್ರಾಯೋಜಕತ್ವದೊಂದಿಗೆ “ಆರೋಗ್ಯಕ್ಕಾಗಿ ತೋಟಗಾರಿಕೆ” ಎಂಬ ಮೂಲ ಧ್ಯೇಯೋಕ್ತಿಯೊಂದಿಗೆ ಪ್ರಸಕ್ತ 2021ರ ತೋಟಗಾರಿಕೆ ಮೇಳವನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಮುಖ್ಯ ಆವರಣದಲ್ಲಿ ಉದ್ಘಾಟಿಸಲಾಯಿತು.
ತೋಟಗಾರಿಕೆ ಮೇಳ-2021ರ ಉದ್ಘಾಟನಾ ಕಾರ್ಯಕ್ರಮವು ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ನಾಡಗೀತೆಯೊಂದಿಗೆ ಆನ್‍ಲೈನ್ ಹಾಗೂ ಸೀಮಿತ ಪ್ರಮಾಣದ ಆಫ್‍ಲೈನ್ ಮೂಲಕ ಪ್ರಾರಂಭವಾಯಿತು. ಡಾ. ವೈ. ಕೆ. ಕೋಟಿಕಲ್ ವಿಸ್ತರಣಾ ನಿರ್ದೇಶಕರು ಮತ್ತು ತೋಟಗಾರಿಕೆ ಮೇಳದ ಅಧ್ಯಕ್ಷರು ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಉದ್ಘಾಟಕರಾಗಿ ಆನ್‍ಲೈನ್ ಮೂಲಕ ಉಪಸ್ಥಿತರಿದ್ದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ತೋಟಗಾರಿಕೆ ಕ್ಷೇತ್ರದ ವಿವಿಧ ತಾಂತ್ರಿಕತೆಗಳ ಅಭಿವೃದ್ಧಿ ಹಾಗೂ ಸಂಶೋಧನೆಗಳಿಂದ ರೈತ ಸಮುದಾಯಕ್ಕೆ ಅನೂಕೂಲವಾಗಲೆಂದು ಈ ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿಯೆ ಸ್ಥಾಪನೆಗೊಂಡ ಈ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ತೋಟಗಾರಿಕೆ ವಿಷಯಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಸಂತೋಷದ ವಿಷಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನವನ್ನು ಪಡೆದಿದ್ದಕ್ಕಾಗಿ ವಿಶ್ವವಿದ್ಯಾಲಯವನ್ನು ಶ್ಲಾಘಿಸುತ್ತ ಜೈವಿಕ ತಂತ್ರಜ್ಞಾನ ಅಭಿವೃದ್ಧಿ, ತೋಟಗಾರಿಕೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆ, ಸಂಶೋಧನೆ, ಮಾರಾಟ, ವ್ಯವಹಾರ ಹಾಗೂ ರಫ್ತುಗಳ ವಿಷಯವಾಗಿ ಇನ್ನು ಹೆಚ್ಚು ಶ್ರಮಿಸುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಕೋವಿಡ್-19ರ ಅವಧಿಯಲ್ಲಿ ಆರೋಗ್ಯ ಸುಧಾರಣೆ ಅತಿ ಮುಖ್ಯವಾಗಿರುವುದರಿಂದ “ಆರೋಗ್ಯಕ್ಕಾಗಿ ತೋಟಗಾರಿಕೆ” ಎಂಬ ಧ್ಯೇಯವನ್ನು ಹೊಂದಿ ಮೇಳವನ್ನು ಆಯೋಜಿಸಿರುವುದು ತುಂಬಾ ಪ್ರಸ್ತುತವಾಗಿದೆ ಹಾಗೂ ತಾಂತ್ರಿಕ ವಿಚಾರ ಗೋಷ್ಟಿಗಳು, ವಿವಿಧ ತೋಟಗಾರಿಕೆ ಬೆಳಗಳ ಪ್ರದರ್ಶನಗಳ ಮೂಲಕ ರಾಜ್ಯದ ರೈತರ ಸಮುದಾಯಕ್ಕೆ ಈ ಮೇಳವು ಉಪಯುಕ್ತವಾಗುತ್ತದೆಂದು ಸಂತೋಷ ವ್ಯಕ್ತಪಡಿಸಿದರು. ಈ ವಿಶ್ವವಿದ್ಯಾಲಯಕ್ಕೆ ಶಿಕ್ಷಣ, ಸಂಶೋಧನೆ, ವಿಸ್ತರಣೆ ಹಾಗು ಮೂಲ ಸೌಕರ್ಯಗಳ ಅಭಿವೃದ್ದಿಗೆ ಅವಶ್ಯಕವಿರುವ ಎಲ್ಲಾ ರೀತಿಯ ಅಗತ್ಯ ಅನುಮೋದನೆ ಹಾಗೂ ಅನುದಾನದ ಸೌಕರ್ಯವನ್ನು ನೀಡುವದೆಂದು ಭರವಸೆ ನೀಡಿ ಮೇಳವು ಯಶಸ್ವಿಯಾಗಲೆಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾದ ಗೋವಿಂದ ಕಾರಜೋಳರವರು, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು, ಲೊಕೋಪಯೋಗಿ ಸಚಿವರು ಹಾಗೂ ಬಾಗಲಕೋಟೆ ಜಿಲಾ ಉಸ್ತುವಾರಿ ಸಚಿವರು, ಕಾರ್ನಾಟಕ ಸರಕಾರ ಇವರು ಆನ್‍ಲೈನ್ ಮೂಲಕ ಹಾಜರಿದ್ದು ಸನ್ಮಾನ್ಯ ಮುಖ್ಯಮಂತ್ರಿಗಳ ಅವಧಿಯಲ್ಲಿ ಸ್ಥಾಪನೆಗೊಂಡ ಈ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳನ್ನು ತಿಳಿಸುತ್ತಾ ಈ ಸಾಧನೆಗೆ ವಿಜ್ಞಾನಿಗಳ ಹಾಗೂ ಇಲ್ಲಿನ ರೈತರ ಪರಿಶ್ರಮವೇ ಕಾರಣ. ವಿಶ್ವವಿದ್ಯಾಲಯದ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಸರ್ಕಾರವು 9.0 ಕೋಟಿ ಅನುದಾನ ನೀಡಿದ್ದು ವಿಶ್ವವಿದ್ಯಾಲಯಕ್ಕೆ ಅವಶ್ಯವಿರುವ ಜಮೀನನ್ನು ಶೀಘ್ರವಾಗಿ ಹಸ್ತಾಂತರಿಸುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವೀರಣ್ಣ ಸಿ. ಚರಂತಿಮಠ, ಶಾಸಕರು, ಬಾಗಲಕೋಟ ಮತ್ತು ಅಧ್ಯಕ್ಷರು ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಭಾಗದ ಜನರ ಆಶೋತ್ತರ ಪೂರೈಸಿದಂತಾಗಿದೆ. ವಿಶ್ವವಿದ್ಯಾಲಯವು ಇನ್ನು ಹೆಚ್ಚಿನ ಬೀಜೋತ್ಪಾದನೆ ಹಾಗೂ ತೋಟಗಾರಿಕಾ ಸಮಗ್ರ ಅಭಿವೃದ್ದಿಗೆ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.
ಸೀಮಿತ ಪ್ರಮಾಣದ ಆಫ್ ಲೈನ್ ಉದ್ಘಾಟನಾ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ದೀಪ ಬೆಳಗಿಸುವದರ ಮೂಲಕ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯಮಾನ್ಯರು ನೆರವೇರಿಸಿದರು. ಮಾನ್ಯ ಕುಲಪÀತಿಗಳಾದ ಡಾ. ಕೆ. ಎಂ. ಇಂದಿರೇಶ ಇವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನವನ್ನು ಪಡೆದ ವಿಶ್ವವಿದ್ಯಾಲಯವಾಗಿದೆ. 2019 ರಿಂದ ಐದು ವರ್ಷಗಳ ವರೆಗೆ ವಿಶ್ವವಿದ್ಯಾಲಯ ಮತ್ತು ಎಂಟು ತೋಟಗಾರಿಕೆ ಮಹಾವಿದ್ಯಾಲಯಗಳಿಗೆ ಐ.ಸಿ.ಎ.ಆರ್. ನವದೆಹಲಿಯಿಂದ ಮಾನ್ಯತೆ ದೊರೆತಿದೆ ಎಂದರು.
ನಂತರ ಮತ್ತೊರ್ವ ಮುಖ್ಯ ಅತಿಥಿಗಳಾದ ವಿಪ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ್ ಅತಿಥಿ ಭಾಷಣದಲ್ಲಿ, ಮೇಳದಲ್ಲಿ ಭಾಗವಹಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸುತ್ತಾ ಈ ವಿಶ್ವದ್ಯಾಲಯವು ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ. ಜಾಗತಿಕ ಮಟ್ಟದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಭಾರತ ದೇಶವು ಪ್ರಥಮ ಸ್ಥಾನಕ್ಕೇರಲು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯತ್ತ ಈ ವಿಶ್ವದ್ಯಾಲಯದ ಪರಿಶ್ರಮ ಅತ್ಯಗತ್ಯ ಎಂದರು.
ಡಾ. ಕೆ. ಸಿ. ನಾರಾಯಣಗೌಡರು, ಸನ್ಮಾನ್ಯ ತೋಟಗಾರಿಕೆ ಸಚಿವರು, ಕರ್ನಾಟಕ ಸರ್ಕಾರ ಮತ್ತು ಸಹಕುಲಾಧಿಪತಿಗಳು, ತೋವಿವಿ, ಬಾಗಲಕೋಟ ಇವರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.