ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಸಹಾಯವಾಣಿ

ಹುಲಸೂರ:ಮೇ.1: ಕೋವೀಡ್ 19-ಲಾಕ್‍ಡೌನ್ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಾರರಿಗೆ ಅನುಕೂಲವಾಗಲೆಂದು ಸಹಾಯವಾಣಿ ಆರಂಭಿಸಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ (ಜಿಪಂ) ಸಂತೋಷ್ ತಾಂಡೂರ್ ತಿಳಿಸಿದ್ದಾರೆ.

ತೋಟಗಾರಿಕೆ ಉತ್ಪನ್ನಗಳಾದ ಹೂ, ಹಣ್ಣು, ತರಕಾರಿ ಇವುಗಳ ಸಾಗಾಣಿಕೆ ಮತ್ತು ಮಾರಾಟಕ್ಕೆ ತೋಟಗಾರಿಕೆ ರೈತರಿಗೆ ತೊಂದರೆಯಾಗದಂತೆ ಅವರಿಗೆ ನೆರವಾಗಲು ಬಸವಕಲ್ಯಾಣ ತಾಲ್ಲೂಕಿನ ಆಯಾ ಹೋಬಳಿ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಜತೆಗೆ ರೈತರಿಗೆ ಗ್ರಿನ್ ಪಾಸ್ ನೀಡಲಾಗುತ್ತಿದೆ. ಬಸವಕಲ್ಯಾಣ-8105451079, ಹುಲಸೂರ-9901592256, ಮಂಠಾಳ-9902929279, ರಾಜೇಶ್ವರ-8105481079, ಮುಡಬಿ-9663742933 ಮತ್ತು ಕೋಹಿನೂರ-9980739132 ಸಂಬಂಧಿತರು ಈ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 9916874287 (ಸಂತೋಷ್ ತಾಂಡೂರ್).