ತೋಟಗಾರಿಕೆ ಬೆಳೆಗಳಲ್ಲಿ ಮಂಗನ ಬಾಲ ಕಳೆಯ ನಿರ್ವಹಣೆ ತರಬೇತಿ

ಸೇಡಂ, ಜೂ,08: ತಾಲೂಕಿನ ಹಯ್ಯಾಳ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಕಲಬುರ್ಗಿ 2 (ರದ್ದೇವಾಡಿಗಿ) ಮತ್ತು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಸೇಡಂ ರವರ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ದಾಡ್ಡರ್ (ಮಂಗನ ಬಾಲ ಕಳೆ) ಕಳೆಯ ನಿರ್ವಹಣೆ ಕ್ರಮಗಳ ಕುರಿತು ಹೊರಾಂಗಣ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಆಡಿ ಮಂಜುನಾಥ್ ಓ ರವರು ಮಾತನಾಡಿ ದಾಡರ್ ಕಳೆಯ ಕುರಿತು ಇದೊಂದು ಪರಾವಲಂಬಿ ಬಳ್ಳಿಯಂತ ಜಾತಿಯ ಹಳದಿ ಬಣ್ಣದ ಕಳೆ ಇದನ್ನು ತಡೆಗಟ್ಟಲು ಪ್ರಥಮ ಹಂತದಲ್ಲಿ ಕಂಡು ಬಂದಾಗ ಕಿತ್ತು ಸುಟ್ಟು ನಾಶ ಪಡಿಸಬೇಕು. ಈಗಾಗಲೇ ಸಾಕಷ್ಟು ರೀತಿಯಲ್ಲಿ ಕಾಣಿಸಿಕೊಂಡಿದ್ದರೆ ಈ ಕೆಳಗಿನ ಹತೋಟಿ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು
1.ಬಿತ್ತನೆ ಪೂರ್ವದಲ್ಲಿ ಕಳೆ ಬಿಜಗಳಿಲ್ಲದ ಶುದ್ಧವಾದ ಬೀಜಗಳನ್ನು ಆಯ್ದುಕೊಳ್ಳುವುದು.2.ಅತಿಥಿ ಬೆಳೆ ಅಥವ ಅತಿಥಿ ಕಳೆಗಳನ್ನ ಬೆಳೆಯದಂತೆ ಮತ್ತು ಬೆಳೆದಿದ್ದರೆ ಅಂತಹ ಕಳೆಗಳನ್ನು ತೆಗೆದುಹಾಕುವುದು.3.ಬೆಳೆಗಳಿಲ್ಲದ ಸಮಯದಲ್ಲಿ ಕಳೆನಾಶಕ ಗಳಾದ ಪ್ಯಾರಕಾಟ್ ಮತ್ತು ಗ್ಲೈಫೆÇೀಸೇಟ್ ಪ್ರತಿ ಲೀಟರ್ ನೀರಿಗೆ 4 ರಿಂದ 5 ಮಿಲಿ ಬೆರೆಸಿ ಸಿಂಪಡಿಸಬೇಕು. ಇದನ್ನು ಬದುಗಳಲ್ಲಿ ಬೆಳೆದ ಕಳೆಗಳಿಗು ಸಿಂಪಡಿಸಬಹುದು.4.ಬಿತ್ತನೆ ಪೂರ್ವದ ಸಮಯದಲ್ಲಿ ಪೆಂಡಿಮಿತಲಿನ್ 30 ಇ ಸಿ ಕಳೆನಾಶಕ ವನ್ನು ಪ್ರತಿ ಲೀಟರ್ ನೀರಿಗೆ 3 ಮಿಲಿ ಬೆರೆಸಿ ಸಿಂಪಡಿಸಬೇಕು.5.ಏಕದಳ ಧಾನ್ಯ ಜೋಳ, ಮೆಕ್ಕೆಜೋಳ, ಕುಸುಬೆ ಬೆಳೆಯುವುದರಿಂದ ಕಳೆ ಹತೋಟಿ ಮಾಡಬಹುದು. ಬೆಳೆ ಪರಿವರ್ತನೆ ಮಾಡುವುದು ಅವಶ್ಯಕ. ಈ ಕಳೆಯನ್ನು ಹತೋಟಿ ಮಾಡದಿದ್ದಲ್ಲಿ ಶೆ. 40 ರಿಂದ 60 ರಷ್ಟು ನಷ್ಟ ಅನುಭವಿಸಬೇಕಾಗುತ್ತದೆ.ನಂತರದಲ್ಲಿ ತೋಟಗಾರಿಕೆ ವಿಜ್ಞಾನಿಗಳಾದ ಆಡಿ. ಚೇತನ್ ಟಿ ರವರು ಮಾತನಾಡಿ ಮಾಗಿ ಉಳುಮೆಯ ಹಂತದಿಂದಲೇ ಇಂತಹ ಕಳೆಗಳನ್ನು ಹತೋಟಯಲ್ಲಿ ಇಡಬೇಕು ಎಂದರು. ಇವರ ನಂತರ ಕೇಂದ್ರದ ಮತ್ತೋರ್ವ ವಿಜ್ಞಾನಿಗಳಾದ ಆಡಿ ವಿಕ್ರಮಸಿಂಹ ಊ ಗಿ ರವರು ಒಂದೇ ಬೆಳೆ ಬೆಳಯುವುದನ್ನು ಬಿಟ್ಟು ಬೆಳೆ ಪರಿವರ್ತನೆ ಮಾಡುವುದನ್ನು ಅಳವಡಿಸಿಕೊಳ್ಳಬೇಕು ಎನ್ನುವ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಗಳಾದ ಬಸವರಾಜ್ ಕೋಡಸಾ ಹಾಗೂ ಗ್ರಾಮದ ಪ್ರಗತಪರ ರೈತರಾದ ಶ್ರೀ ಶ್ರೀನಿವಾಸ ರೆಡ್ಡಿ, ವೆಂಕಟರೆಡ್ಡಿ, ಜನಾರ್ಧನರೆಡ್ಡಿ ಇತರೆ ಮುಖಂಡರಿದ್ದರು ಇದ್ದರು.