ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸನ್ಮಾನ


ಸಂಜೆವಾಣಿ ವಾರ್ತೆ
ಸಂಡೂರು :ಜ:4: ಸಂಡೂರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಬಿ.ಸಿ.ಎಂ. ವಸತಿ ನಿಲಯದ ಪಕ್ಕದಲ್ಲಿರುವ ತೋಟಗಾರಿಕೆ ಕಛೇರಿಯಲ್ಲಿನ ಸಹಾಯಕ ನಿರ್ದೇಶಕರಾದ ಹನುಮನಾಯ್ಕ ರವರಿಗೆ ವಿನ್ ಪಿನಿತ್ ಕಂಪನಿಯ ಮಾಲೀಕರಾದ ಬಿ.ಎಂ. ಶಿವಕುಮಾರ ಶಾಲು ಹೊದಿಸಿ ಸನ್ಮಾನ ಮಾಡುವುದರ ಮೂಲಕ ಅಧಿಕಾರಿಯನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಬಣವಿಕಲ್ಲು ಮಂಜುನಾಥ, ಗ್ರಾ.ಪಂ. ಸದಸ್ಯ ಗುಂಡುಮುಣುಗು ಗ್ರಾಮದ ಚಂದ್ರಶೇಖರಗೌಡ್ರು, ತೋರಣಗಲ್ಲಿನ ತೋಟಗಾರಿಕೆ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ಕಛೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು