ತೋಟಗಾರಿಕೆ ಇಲಾಖೆಯಿಂದ ಸಸಿ ವಿತರಣೆ

ಕೊಟ್ಟೂರು ನ 20 :ತಾಲೂಕಿನ ಹ್ಯಾಳ್ಯಾದಲ್ಲಿ ತೋಟಗಾರಿಕೆ ಇಲಾಖೆಯಿಂದ ತಮ್ಮ ಮನೆಗಳ ಆವರಣದಲ್ಲಿ ಪೌಷ್ಠಿಕತೆ ಕೈ ತೋಟ ನಿರ್ಮಾಣಕ್ಕೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು.
ತಾಲೂಕು ಪಂಚಾಯಿತಿ ಇಒ ಮಾತನಾಡಿ ಉಚಿತವಾಗಿ ತೆಂಗು, ಮಾವು, ನಿಂಬೆ, ಕರಿಬೇವು, ಸಪ್ಪಾಯಿ ಸೇರಿದಂತೆ 15 ಸಸಿಗಳನ್ನು ವಿತರಣೆ ಮಾಡುತ್ತಿದ್ದು ಮನೆಯ ಆವರಣದಲ್ಲಿ ಕೈ ತೋಟ ಮಾಡಿಕೊಳ್ಳಿರಿ ಎಂದರು. ಕೋನಾಪುರ ಬಸವರಾಜ, ತಾಲೂಕು ಪಂಚಾಯಿತಿ ಅಧ್ಯಕ್ಷ ಶಾನಬೋಗರ ಗುರುಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವೆಂಕಟೇಶನಾಯ್ಕ, ತೋಟಗಾರಿಕೆ ಇಲಾಖೆಯ ನಾಗರಾಜ, ತಾಲೂಕು ಪಂಚಾಯಿತಿ ಎಡಿ ಕೆಂಚಪ್ಪ ಸೇರಿದಂತೆ ಇತರರು ಇದ್ದರು.