ತೋಟಗಾರಿಕೆ ಇಲಾಖೆಯಿಂದ ತರಕಾರಿ ಕಿಟ್ ವಿತರಣೆ

ಹೊಸಪೇಟೆ ಮೇ29: ನಗರದ ಸೇರಿದಂತೆ ಹೊರವಲಯದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ತೋಟಗಾರಿಕೆ ಇಲಾಖೆ ಹಾಗೂ ತುಂಗಭದ್ರಾ ತೋಟಗಾರಿಕೆ ರೈತ ಉತ್ಪಾದನಾ ಕಂಪನಿವತಿಯಿಂದ 250 ತರಕಾರಿ ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು.
ಈರುಳ್ಳಿ, ಹಸಿಮೆಣಸಿನಕಾಯಿ, ಟಮೊಟಾ, ನುಗ್ಗೆಕಾಯಿ ಸೇರಿದಂತೆ ಇತರೆ ತರಕಾರಿ ಪದಾರ್ಥಗಳನ್ನು ರೈತರಿಂದ ಖರೀದಿಸಿ ಉಚಿತವಾಗಿ ವಿತರಿಸಲಾಯಿತು. ತಾಲೂಕಿನ ಕೊಂಡನಾಯಕನಹಳ್ಳಿಯಲ್ಲಿ ನೆಲೆಸಿರುವ ಬೀದರ್ ಜಿಲ್ಲೆಯ ಹುಮನಾಬಾದ್‌ನ ಅಲೆಮಾರಿ ಕುಟುಂಬಗಳಿಗೆ 50, ಕಾರಿಗನೂರಲ್ಲಿನ ಅಲೆಮಾರಿಗಳಿಗೆ 100, ನಗರದ ಎಂ.ಪಿ.ಪ್ರಕಾಶ್‌ನಗರದ ಸುಂಕ್ಲಮ್ಮ ದೇವಸ್ಥಾನದ ಬಳಿಯ ಮಹಾರಾಷ್ಟ್ರ ಮೂಲದ ಅಲೆಮಾರಿಗಳಿಗೆ 50, 9ನೇ ವಾರ್ಡ್ನಲ್ಲಿನ ಬುಡಕಟ್ಟು ಜನರಿಗೆ 30 ಹೀಗೆ ಒಟ್ಟು 250 ತರಕಾರಿ ಕಿಟ್‌ಗಳನ್ನು ವಿತರಿಸಿಲಾಯಿತು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್, ಸಿಇಒ ಭರತ್, ವ್ಯವಸ್ಥಾಪಕಿ ವೇದಾವತಿ, ಸಂಡೂರಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮೇಶ ನಾಯಕ್, ಸಣ್ಣ ಮಾರೆಪ್ಪ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.