
ಬೀದರ:ಮೇ.5: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ ಬೀದರನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಶುಭದಿನದ ಕರ್ಯಕ್ರಮವನ್ನು ನಮ್ಮೊಂದಿಗೆ ಆಚರಿಸಲು ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‍ರಾದ ಡಾ. ಎಸ್.ವಿ. ಪಟೀಲ್ ಸರ್ ಅವರು ಅಧ್ಯಕ್ಷತೆ ಸ್ಥಾನವನ್ನು ವಹಿಸಿದ್ದರು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಎನ್.ಎಸ್.ಎಸ್. ಸಂಯೋಜಕರಾದ ಡಾ. ನಾಗೇಂದ್ರ ಕಾವಳೇ ಅವರು ಹೇಳಿದರು.
ಅವರ ಜೋತೆಗೆ ಡಾ. ಅಶೋಕ ಸೂರ್ಯವಂಶಿ ಡಾ. ಪ್ರವೀಣ್ ಜೋಳಗಿಕರ, ಡಾ. ರಾಜಕುಮಾರ ಹಾಗೂ ಅರ್ಜುನ್ ಭಂಡಾರಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಮಿಕರಾದ ವೀರಸ್ವಾಮಿ ಅವರು ಕಾರ್ಮಿಕರ ದಿನಾಚರಣೆ ಕುರಿತು ಮಾತನಾಡಿದರು.
ಅಧ್ಯಕ್ಷರಾದ ಡೀನ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂಧಿಗಳು ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಕಾರ್ಮಿಕರು ಉಪಸ್ಥಿತರಿದ್ದರು. ಎಲ್ಲರ ಸಹಕಾರದಿಂದಾಗಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಅಚರಿಸಲಾಯಿತು. ಕೊನೆಗೆ ಶಶಿಕಲಾ ಅವರು ವಂದನಾರ್ಪಣೆ ನಡೆಸಿದರು. ಮಂಜುಳಾ ಅವರು ಪ್ರಾರ್ಥನಾ ಗೀತೆ ಹಾಡಿದರು. ಎನ್.ಎಸ್.ಎಸ್. ಸ್ವಯಂ ಸೇವಕಿ ಚೇತನಾ ನಿರೂಪಿಸಿದರು.