
ಶಿರಹಟ್ಟಿ,ಮಾ.14: ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾದ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಜಗನ್ನಾಥ ಹಣಗಿ ಎಂಬುವರ ತೋಟಕ್ಕೆ ಬೆಂಕಿ ತಗುಲಿ ಪೇರಲ ಮತ್ತು ನುಗ್ಗೆ ಬೆಳೆ ನಾಶವಾಗಿದೆ. ಅಲ್ಲದೆ ನೀರಾವರಿಗೆ ಸಂಬಂಧಿಸಿದ ಪರಿಕರಗಳು ಸಹ ಸುಟ್ಟು ಅಪಾರ ಹಾನಿ ಸಂಭವಿಸಿದೆ.
ಬದುವಿಗೆ ಬೆಂಕಿ ತಗುಲಿ ವಿಸ್ತರಿಸುತ್ತ ತೋಟಕ್ಕೆ ತಗುಲಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಧಾವಿಸಿ ಬೆಂಕಿಯನ್ನು ನಂದಿಸಿದರು.