ತೊರವಿಯಲ್ಲಿ ಮತ ಚಲಾಯಿಸಿದ ಕೈ ಅಭ್ಯರ್ಥಿ ರಾಜು ಆಲಗೂರ

ವಿಜಯಪುರ,ಮೇ.7:ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಸ್ವಗ್ರಾಮ ತೊರವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಬಾಲಕಿಯರ ಶಾಲೆಯ ಮತಗಟ್ಟೆ ನ,97ರಲ್ಲಿ ಮತ ಚಲಾಯಿಸಿದರು.
ಪುತ್ರಿ ಭವಾನಿ ಜೊತೆಗೆ ಮತಗಟ್ಟೆಗೆ ಆಗಮಿಸಿದ ಆಲಗೂರ ಅವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಅನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಬಾರಿ ಮತದಾರರು ತಮ್ಮ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ. ಗೆಲವು ನನ್ನದೆ ಎಂದರು.