ತೊಡಿಕಾನ ಕಾಲನಿಯಲ್ಲಿ ಕೊರೊನಾ ಸ್ಪೋಟ ಹಿನ್ನೆಲೆ-ಚೆಂಬು-ತೊಡಿಕಾನ ರಸ್ತೆ ಬಂದ್

ಸುಳ್ಯ, ಜೂ.೯- ತೊಡಿಕಾನದ ಅಡ್ಯಡ್ಕ ತಮಿಳು ಕಾಲನಿಯಲ್ಲಿ ಕೊರೊನ ಸ್ಪೋಟಗೊಂಡಿರುವ ಹಿನ್ನೆಲೆಯಲ್ಲಿ ಪೆತ್ತಾಜೆ ಎಂಬಲ್ಲಿ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ.
ತೊಡಿಕಾನದಲ್ಲಿ ಕೊರೊನ ಪ್ರಕರಣಗಳ ಹೆಚ್ಚಳದಿಂದ ಆತಂಕಗೊಂಡಿರುವ ಚೆಂಬು ಪಂಚಾಯಿತಿ ಸಂಪಾಜೆ ಬಾಲೆಂಬಿಯಾಗಿ ತೊಡಿಕಾನಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಿದೆ. ಜೆಸಿಬಿಯ ಮೂಲಕ ಹತ್ತಾರು ಟಿಪ್ಪರ್ ಮಣ್ಣು ಹಾಕಲಾಗಿದ್ದು,ರಸ್ತೆ ಬಂದ್ ಆಗಿರುವ ಮಾಹಿತಿ ಇಲ್ಲದೆ ಇರುವ ವಾಹನದವರು ಹಿಂತಿರುಗಿ ಬಂದು ಅರಂತೋಡು ಮಾರ್ಗವಾಗಿ ತೊಡಿಕಾನಕ್ಕೆ ಹೋಗಬೇಕಾಗುತ್ತದೆ.