ತೊಟಕ್ಕೆ ನುಗ್ಗಿ ೩ ಲಕ್ಷ ಮೌಲ್ಯದ ಅಡಕೆ ಕದ್ದ ಕಳ್ಳರು

ಹರಿಹರ.ಸೆ.೧೬; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ರೈತನ ಕೈಗೆ ಸಿಗಬೇಕಾದ ಕಟಾ ವಿಗೆ ಬಂದ ಅಡಕೆ ಬೆಳೆಯನ್ನು ಕತರ್ನಾಕ್ ಕಳ್ಳರು ರಾತ್ರೋ ರಾತ್ರಿ ಲೂಟಿ ಮಾಡಿರುವ ಘಟನೆ ಹರಿಹರ ತಾಲ್ಲೂಕಿನಲ್ಲಿ ಸಂಭವಿಸಿದೆ. ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮ ದ ಮಹಜೇನಹಳ್ಳಿ ಸರ್ವೇ ನಂಬರ್ ನಲ್ಲಿರುವ ೪ ಜನ ರೈತರ ಜಮೀನಿನಲ್ಲಿ ಫಲವತ್ತಾಗಿ ಬೆಳೆದಿದ್ದ ಅಡಕೆಯ ಗೊಂಚಲು ಸಮೇತವಾಗಿ ಕಳ್ಳರು ಕದ್ದೊಯ್ದಿದ್ದಾರೆ. ಬೆಳಿಗ್ಗೆ ರೈತ ಬಸವರಾಜ್ ತನ್ನ ಜಮೀನಿಗೆ ಹೋದಾಗ ಅಡಿಕೆ ಎಲ್ಲಂದರಲ್ಲಿ ಚಲ್ಲಾಪಿಲ್ಲಿಯಾಗಿರುವುದನ್ನು ಕಂಡು ದಿಗ್ಬೆçಮೆಯಾಗಿ ತೋಟದ ಒಳಗಡೆ ಹೋಗಿ ನೋಡಿದಾಗ ಮರದಲ್ಲಿದ್ದ ಹದಕ್ಕೆ ಬಂದ ಅಡಕೆ ಯನ್ನು ಕತ್ತರಿಸಿರುವುದು ಕಂಡುಬAದಿದೆ. ಕೂಡಲೆ ತಮ್ಮ ಅಕ್ಕ ಪಕ್ಕದ ಜಮೀನಿನನವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದಾಗ ಅವರು ಸಹ ತಮ್ಮ ಜಮೀನಿನಲ್ಲಿನ ಅಡಕೆ ಬೆಳೆಯನ್ನು ನೋಡಿ ಕೊಂಡಾಗ ತಮ್ಮ ಹೊಲದಲ್ಲಿನ ಅಡಕೆ ಬೆಳೆ ಕಳ್ಳತನ ವಾಗಿರುವುದು ಕಂಡುಬAದಿದೆ. ಕೂಡಲೇ ಪೊಲೀಸ ರಿಗೆ ರೈತರು ಮಾಹಿತಿ ನೀಡಿದ್ದಾರೆ.ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳ್ಳತನವಾಗಿರು ಅಡಕೆಯನ್ನ ವೀಕ್ಷಿಸಿದರು.
ಕಳ್ಳತನವಾಗಿರುವ ಕುರಿತು ದೂರನ್ನು ನೀಡಿ, ನಾವು ತನಿಖೆಯನ್ನು ಕೂಡಲೇ ಪ್ರಾರಂಭಿಸುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಿದ್ದಾರೆ.ಹನಗ ವಾಡಿಯ ರೈತರಾದ ಡಿ.ವೀರಭದ್ರಪ್ಪ, ಡಿ.ರಮೇಶ್, ಬಿ.ಕುರುವತ್ತೆಪ್ಪ ನವರ ಜಮೀನುಗಳಲ್ಲಿ ಅಡಕೆ ಬೆಳೆ ಕಳ್ಳತನವಾಗಿದ್ದು ಸುಮಾರು ಮೂರು ಲಕ್ಷ ಮೌಲ್ಯದ ಬೆಳೆ ಕಳ್ಳರ ಪಾಲಾಗಿದೆ ಎಂದು ರೈತರು ಮಾಹಿತಿ ನೀಡಿದರು.
ಸ್ಥಳಕ್ಕೆ ಗ್ರಾಮಾಂತರ ಪಿಎಸ್‌ಐಗಳಾದ ಡಿ.ರವಿ ಕುಮಾರ್, ಸೈಫುದ್ದೀನ್, ಸಿಬ್ಬಂದಿಗಳಾದ ಕೃಷ್ಣಾ, ವೆಂಕಟೇಶ್ ಹಾಗೂ ರೈತರಾದ ಬಸವರಾಜ್, ಪ್ರಶಾಂತ್, ಶಿವಶಂಕರ್, ರಾಕಿ, ಆರ್. ಬಿ. ಪ್ರವೀಣ್ ಹನಗವಾಡಿ, ವೀರೇಶ್ ಮತ್ತಿತರರಿದ್ದರು.