ತೊಗಲುಗೊಂಬೆಯಾಟ ಪ್ರದರ್ಶನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.29: ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಶ್ರೀಮಾರುತಿ ತೊಗಲುಗೊಂಬೆಕಲಾಟ್ರಸ್ಟ್ (ರಿ) ಬಳ್ಳಾರಿ ಇವರಿಂದ ಕನ್ನಡ ಭವನ ಸೆಂಟ್ರಲ್ ಲೈಬ್ರರಿ ಹತ್ತಿರ .ರಾಮರಾವಣರ ಯುದ್ಧ…ವೆನ್ನುವ ತೊಗಲುಗೊಂಬೆಯಾಟ ಪ್ರದರ್ಶನಗೊಂಡಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಇವರು ನೆರವೇರಿಸಿ ತೊಗಲುಗೊಂಬೆ ಕಲಾ ಪ್ರಕಾರವು ಸಾವಿರಾರು ವರ್ಷಗಳ ಇತಿಹಾಸವಿರುವ ಕಲೆ ಇದನ್ನು ಶ್ರೀಮಂತಿಕೆಗೊಳಿಸಿದವರು. ಅಂತಾರಾಷ್ಟ್ರೀಯ ಕಲಾವಿದ ಬೆಳಗಲ್ಲು ವೀರಣ್ಣನವರು ಇದು ಹೀಗೆ ಯಶಶ್ವಿಯಾಗಿ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟರು
ಅದ್ಯಕ್ಷತೆಯನ್ನು ಬಯಲಾಟ ಕಲಾವಿದ ಜಿ..ನಾಗನಗೌಡ  ವಹಿಸಿದ್ದರು.
ಅತಿಥಿಗಳಾಗಿ ರಮಣಪ್ಪ ಭಜಂತ್ರಿ, ಅಲೆಮಾರಿ ಬುಡಕಟ್ಟು ಜನಪರ ಸೇವಾಸಂಘ ರಾಜ್ಯಾಧ್ಯಕ್ಷ ಮಾದನಂ ಮಾರೆಪ್ಪ ತಿಪ್ಪೇಸ್ವಾಮಿ ಬಯಲಾಟ ಕಲಾವಿದರು ಡಿ..ವಿರುಪಾಕ್ಷ ದೇವಲಾಪುರ, ಕೊಮಾರಿಗೌಡ ಅಮರಾಪುರ, ಸುಂಕಣ್ಣ ಜಿಲ್ಲಾಧ್ಯಕ್ಷರು ಡಾ. ಬಾಬು ಜಗಜ್ಜೀವನ್ ರಾಮ್ ಅಂಗವಿಕಲ ಜಿಲ್ಲಾಧ್ಯಕ್ಷರು ಬಳ್ಳಾರಿ, ಬಿ.ಆನಂದ ಕಲ್ಲುಕಂಬ ಚಿಗರು ಕಲಾತಂಡ ಅದ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ವಂದಿಸಿದರು.