ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದ 7 ಕೆ.ಜಿ. ಗಾಂಜಾ ಜಪ್ತಿ

ಚಿಂಚೋಳಿ,ಸೆ.14-ತಾಲೂಕಿನ ಕುಂಚಾವರಂ ಗಡಿ ಗ್ರಾಮವಾದ ಸಂಗಾಪೂರ ಗ್ರಾಮದ ನಿವಾಸಿ ರೈತ ವಿನೋದ ಪಾಂಡು ರಾಠೋಡ ಎಂಬುವವರ ಹೊಲದಲ್ಲಿ ತೊಗರಿ ಬೆಳೆ ಸಾಲಿನಲ್ಲಿ ಅಕ್ರಮವಾಗಿ ಬೆಳೆದಿದ್ದ 48650 ರೂ.ಮೌಲ್ಯದ 6.9 ಕೆಜಿ ಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚಿತ್ತಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕÀ ವಿಜಯಕುಮಾರ ರಾಂಪೂರೆ, ಚಿತ್ತಾಪೂರ ಉಪ ವಿಭಾಗ ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬಿ.ಬೇಲೂರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಪ್ರಕಾಶ ಜಾಧವ, ನರೇಂದ್ರ ಲಕ್ಕ, ಉಪ ವಿಭಾಗದ ನಿರೀಕ್ಷಕರಾದ ಶರಣಗೌಡ ಬಿರಾದಾರ, ವಲಯ ಸಿಬ್ಬಂದಿಗಳಾದ ಕಲ್ಲಯ್ಯ, ಪುಂಡಲೀಕ, ಶಿವರಾಜ, ಸಿದ್ಧಾರೂಢ ಮತ್ತು ಗೌತಮ ಬುದ್ಧ ಅವರು ದಾಳಿ ನಡೆಸಿ ವಿನೋದ ಪಾಂಡು ರಾಠೋಡ್ ಅವರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.