
ವಿಜಯಪುರ,ಜ.8-ತೊಗರಿ ರಾಶಿ ಮಾಡುವ ವೇಳೆ ತೊಗರಿ ಮಷೀನ್ನಲ್ಲಿ ಸಿಲುಕಿಕೊಂಡು ಮಹಿಳೆ ಸಾವಿಗೀಡಾದ ದಾರುಣ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಚಕ್ಕಬೇವನೂರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತಳನ್ನು ಚಿಕ್ಕಬೇವನೂರ ಗ್ರಾಮದ ನಿವಾಸಿ ಸುಜಾತಾ ಅಮೋಗಸಿದ್ಧ ಬಗಲಿ ಎಂದು ಗುರುತಿಸಲಾಗಿದೆ.
ಸುಜಾತಾ ಬಗಲಿ, ತೊಗರಿ ರಾಸಿ ಮಾಡುವ ವೇಳೆ ಆಯತಪ್ಪಿ ತೊಗರಿ ಮಷೀನ್ ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾಳೆ. ಈ ಸಂಬಂಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.