ತೊಗರಿ ಬೆಳೆಗೆ ನೆಟೆ ರೋಗ: ಮುಂಜಾಗ್ರತಾ ಕ್ರಮಕ್ಕೆ ರೈತರಿಗೆ ಸಲಹೆ

ಕಲಬುರಗಿ,ನ.21-ಜಿಲ್ಲೆಯ ಒಟ್ಟಾರೆ ಎಲ್ಲಾ ತಾಲೂಕುಗಳಲ್ಲಿ ತೊಗರಿ ಬೆಳೆಯು ಬೆಳವಣಿಗೆ ಉತ್ತಮವಾಗಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿದೆ. ಅಲಲ್ಲಿ ನೀರು ನಿಂತು ಹೋದ ಭೂಮಿಯಲ್ಲಿ-ಪೈಟೊಪತ್ತೊರ ಎಲೆ ಚುಕ್ಕೆ ರೋಗದ ಬಾಧೆಯಿಂದ ನೆಟೆ ರೋಗ ಕಂಡುಬಂದಿದೆ ಇದರ ನಿರ್ವಹಣೆಗಾಗಿ ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕರ ಕಂದು ಬಣ್ಣದ ಚುಕ್ಕೆ ಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹೂ ಉದುರುವವು. ಉಷ್ಣಾಂಶ 25 ಸಿ. ಕ್ಕಿಂತ ಕಡಿಮೆ ಹಾಗೂ ಮೋಡ ಕವಿದ ವಾತವರಣ ಮತ್ತು ತುಂತುರು ಮಳೆ, ಮುಂಜಾನೆ 3-4 ತಾಸು ಮಂಜು ಇದ್ದಾಗ ರೋಗದ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲು.ಪಿ ಬೆರೆಸಿ ಸಿಂಪಡಿಸಬೇಕು. ಜೇವರ್ಗಿ ತಾಲೂಕಿನಲ್ಲಿ ತೊಗರಿ 75% ಹೂ ಬಿಟ್ಟಿರುತ್ತದೆ. ಮರುಕಾ (ಜಾಡಮಿ/ಜೊಂಡಾಳಿ) ಬಾಧೆಯ ಹತೊಟಿ ಇದರ ನಿರ್ವಹಣೆಗಾಗಿ: ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 60 ಮಿ.ಲೀ. ಪ್ರತಿ ಎಕರೆಗೆ ಬರುವಂತೆ ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ) ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ ತೊಗರಿಯಲ್ಲಿ ಹೂ ಮತ್ತು ಕಾಯಿ ಉದುರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು – ಪಲ್ಸ ಮ್ಯಾಜಿಕ್ 2ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು.(ವಲಯ ಕೃಷಿ ಸಂಶೊಧನಾ ಕೇಂದ್ರ, ಕಲಬುರಗಿಯಲ್ಲಿ ಲಭ್ಯವಿರುತ್ತದೆ (9880323707).
@12bc = ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳ ನಿರ್ವಹಣೆ
ಥ್ರಿಪ್ಸ್ ನುಶಿ ಹಾಗೂ ಹಸಿರು ಜಿಗಿ ಹುಳುಗಳ ಬಾಧೆ ಕಂಡುಬಂದಲ್ಲಿ ಅಸಿಟಾಮಿಪ್ರಿಡ್ 20ಎಸ್.ಪಿ.0.15ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.3 ಮಿಲಿ ಅಥವಾ ಥಯೋಮಿಥಾಕ್ಸಾಂ 20 ಡಬ್ಲೂಜಿ 0.2 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಇವುಗಳನ್ನು ನಿರ್ವಹಣೆ ಮಾಡಬಹುದು.
@12bc = ರೈತರಿಗೆ ವಿಷೇಶ ಸೂಚನೆ
ಪೀಡೆ ನಾಶಕ ಕೊಂಡುಕೊಳ್ಳುವಾಗ ನಿಗದಿತ ರಶೀದಿ ಪಡೆದು ಕಾಯಿದಿರಿಸಿಕೊಳ್ಳಿ, ಸಿಫಾರಸ್ಸು ಮಾಡಿದ ಪೀಡೆ ನಾಶಕವನ್ನೆ ಕರಿದಿಸಿ ಸಿಂಪಡಿಸಬೇಕು, ಪೀಡೆ ನಾಶಕ ಸಿಂಪರಣೆ ಮಾಡುವಾಗ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ರೈತರು ಯಾವುದೆ ವಿವರಣೆ/ಖಚಿತ ಮಾಯಿತಿಯಿಲ್ಲದ ಹಾಗೂ ಸಿಫಾರಸ್ಸು ಮಾಡದಿರುವ ಹಾಗೂ ನೋಂದಾಯಿಸದ ಕೀಟ ನಾಶಕ ಸಿಂಪಡಿಸಬಾರದು. ಇದರಿಂದ ಸಮರ್ಪಕವಾಗಿ ಪೀಡೆ ನಿರ್ವಹಣೆಯಾಗದೆ ಮನುಷ್ಯ, ಪ್ರಾಣಿ ಮತ್ತು ಪರಿಸರಕ್ಕೆ ಧಕ್ಕೆಯಾಗುವ ಸಂಭವ ಇರುತ್ತದೆ.