ತೊಗರಿ ಬೀಜದ ಮಿನಿ ಕಿಟ್ ವಿತರಣೆ

ಜಗಳೂರು.ಜೂ.೮; ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ  ವತಿಯಿಂದ 160 ರೈತರಿಗೆ ಉಚಿತವಾಗಿ ತೊಗರಿ ಬೀಜದ ಮಿನಿ ಕಿಟ್ ಗಳನ್ನು ಶಾಸಕರಾದ ಎಸ್.ವಿ. ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು ನಂತರ ಮಾತನಾಡಿದ ಅವರು ತಾಲೂಕಿನಲ್ಲಿಮರೇನಹಳ್ಳಿ. ದಿಬ್ಬದಹಳ್ಳಿ. ಸಿದ್ದಮ್ಮನಹಳ್ಳಿಹಳವದಂಡೆ. ಉರುಲಕಟ್ಟೆ.ಚಿಕ್ಕಅರಕೆರೆ ಮೀನಿಗರ ಹಳ್ಳಿ.ಮಲೆಮಾಚಿ ಕೆರೆ ಗ್ರಾಮಗಳನ್ನುಕೃಷಿ ಇಲಾಖೆಯಿಂದ ದತ್ತು ಗ್ರಾಮಗಳನ್ನಾಗಿಆಯ್ಕೆ ಮಾಡಿಕೊಂಡು ಅಲ್ಲಿನ ಅರ್ಹ ಫಲಾನುಭವಿಗಳಿಗೆ ತೊಗರಿ ಬೀಜ ದ ಕೀಟ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದರು.ಜಗಳೂರು ತಾಲ್ಲೂಕಿನ ಎಲ್ಲ ರೈತರು ಕಡ್ಡಾಯವಾಗಿ ನಮ್ಮ ಕೃಷಿ ಇಲಾಖೆಯಿಂದ ತೊಗರಿ ಬೀಜವನ್ನು ಸಬ್ಸಿಡಿ ದರದಲ್ಲಿ ಪಡೆದುಕೊಂಡು ತಮ್ಮ ಜಮೀನುಗಳಲ್ಲಿ ಅಕ್ಕಡಿ ಬೆಳೆಯಾಗಿ ಬಿತ್ತನೆ ಮಾಡಬೇಕು ರೈತರು ಬೀಜ ಕರಿದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯಾದಾಗ ಮುಖಕ್ಕೆ ಮಾಸ್ಕ್ ಮತ್ತು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಶಾಂತರೀತಿಯಿಂದ ಬಿತ್ತನೆ ಬೀಜ ಮತ್ತು ಗೊಬ್ಬರ ವನ್ನು ಖರೀದಿ ಮಾಡಬೇಕು ಎಂದರುಈ ಸಂದರ್ಭದಲ್ಲಿ  ಜಗಳೂರು ತಾಲೂಕಿನ ಕೃಷಿ ಇಲಾಖೆ  ಸಹಾಯಕ ನಿರ್ದೇಶಕರಾದ ಶ್ರೀನಿವಾಸಲು. ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದ್ಯಸರು ಅಂಜಿನಪ್ಪ, ಕೃಷಿ ಅಧಿಕಾರಿ ಹರ್ಷ, ರೇಣುಕುಮಾರ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಸೇರಿದಂತೆ ಜನಪ್ರತಿನಿಧಿಗಳು ಮುಖಂಡರು ಹಾಜರಿದ್ದರು.