ತೊಗರಿ ನೆಟೆ ರೋಗ ನಿಯಂತ್ರಣಕ್ಕೆ ಸಲಹೆ

ಕಲಬುರಗಿ :sಸೆ.12:ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಮಳೆಯ ನಂತರ ತಗ್ಗು ಪ್ರದೇಶದ ಹೊಲಗಳಲ್ಲಿ ನೀರು ನಿಂತು ಮೂರೇ ದಿನಗಳಲ್ಲಿ ಗಿಡಗಳು ಸೊರಗಿ ಸಾಯುತ್ತಿವೆ. ಹತೋಟಿಗೆ ಸಿಗದ ಹೊಲಗಳಲ್ಲಿ ಮುಂದಿನ ದಿನಗಳಲ್ಲಿ ರೈತರು ಹಿಂಗಾರು ಬೆಳೆಗಳಾದ ಜೋಳ, ಕುಸುಬೆ, ಕಡಲೆ, ಬೆಳೆಯಬಹುದಾಗಿದೆ. ನೀರು ನಿಂತು ಸುಮಾರು 50% ರಿಂದ 70% ಸೊರಗಿದ ಹೊಲಗಳಿಗೆ ರಾಸಾಯನಿಕ ಚಿಕಿತ್ಸೆ ಕೊಟ್ಟರು ಗಿಡ ನೆಟೆ ತಡೆಗೆ ಪರಿಹಾರವಲ್ಲ. ಆರಂಭದ ಹಂತದಲ್ಲಿ ನೆಟೆ ತಡೆಗೆ ಟ್ರೈಕೋಡರ್ಮಾ 5 ಗ್ರಾ. ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಕಾಂಡ, ಬೇರು ಭಾಗ ನೆನೆಯುವಂತೆ ಸಿಂಪಡಿಸಬೇಕು. ಹೊಲಗಳಲ್ಲಿ ತೇವಾಂಶ, ನೀರಿನಿಂದ ಎಲೆ ಹಳದಿ ಕಂಡಬಂದಿದ್ದು. ಬೇವು ಮಿಶ್ರಿತ ಯೂರಿಯಾ ಎಕರೆಗೆ 15 ಕಿ.ಗ್ರಾ. ಪ್ರತಿ ಎಕರೆಗೆ ಭೂಮಿಗೆ ಎರಚಬೇಕು ಅಥವಾ ಎನ್‍ಪಿಕೆ 19:19:19 ಪೋಷಕಾಂಶ ಮಿಶ್ರಣವನ್ನು 5 ಗ್ರಾ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೆಳೆ ಉತ್ತಮ ಬೆಳವಣಿಗೆಗೆ ಬೆಳೆಯ ಸಾಲುಗಳಲ್ಲಿ ಎಡೆಕುಂಟೆ ಅಂತರ ಬೇಸಾಯ ಕೈಗೊಳ್ಳಬೇಕು. ತೊಗರಿ ಕಾಂಡ ಮಚ್ಚೆ ರೋಗ ಕಂಡು ಬಂದಲ್ಲಿ ಮೆಟಾಲಾಕ್ಸಿಲ್ ಹಾಗೂ ಮ್ಯಾಂಕೋಜೆಬ್ ಸಂಯುಕ್ತ ಶೀಲೀಂದ್ರ ನಾಶಕವನ್ನು 2 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಕಾಂಡ ಬೇರುವ್ಯಾಪ್ತಿ ನೆನೆಯುವಂತೆ ಸಿಂಪಡಸಿಬೆಕೆಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗಶಾಸ್ತ್ರದ ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್ ರವರು ತಿಳಿಸಿದರು