ಕರಜಗಿ:ಅ.7:ಅಫಜಲಪುರ ತಾಲೂಕಿನ ಕರಜಗಿ ಗ್ರಾಮ ಪಂಚಾಯತಿಯಲ್ಲಿ ಕೃಷಿ ಮೇಳ-2023 ಹಾಗೂ ನೋಂದಣಿ ಸಪ್ತಾಹ ತೊಗರಿ ನೆಟೆರೋಗಕ್ಕೆ ಬಿಜೋಪಚಾರ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು
ಪ್ರತಿಯೊಬ್ಬ ರೈತರು ಸರಕಾರದ ವಿವಿದ ಯೊಜನೆಗಳ ಸದುಪಯೊಗ ಪಡೆದುಕೊಳ್ಳಬೇಕು ಎಂದು ಕರಜಗಿ ರೈತ ಸಂಪರ್ಕದ ಕೃಷಿ ಅದಿಕಾರಿಯಾದ ಸೈಫನ ಮುಲ್ಲಾ ತಿಳಿಸಿದರು
ತಾಲೂಕಿನ ಕರಜಗಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ಸಂಕಲ್ಪ ಸಪ್ತಾಹ ಕೃಷಿ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು,
ರೈತರು ನಮ್ಮ ಕೃಷಿ ಇಲಾಖೆಯಿಂದ ಯಾವ ಸವಲತ್ತುಗಳಿವೆ ಮತ್ತು ಸಬ್ಸಿಡಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಇತಂಹ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ ಅಲ್ಲದೆ ರೈತರಿಗೆ ನಟೆ ರೋಗದ. ಬಿಜೊಪಚಾರದ ಬಗ್ಗೆ ಮಾಹಿತಿ ನೀಡಿದರು,
ಪಿ,ಎಮ್,ಕಿಸಾನ ಯೊಜನೆ ಅಡಿಯಲ್ಲಿ ಕರಜಗಿ ಗ್ರಾಮದ 186 ರೈತರು ಕಿವೈಸಿ ಮಾಡಿಸಿಕೊಂಡಿಲ್ಲಾ ಮತ್ತು ಗ್ರಾಮದ 121,ಜನರಿಗೆ ಇನ್ನು ಬೆಳೆ ಪರಿಹಾರ ಬಂದಿಲ್ಲಾ ಅದಕ್ಕಾಗಿ ರೈತರು ಎನ್,ಪಿ,ಸಿ,ಐ,ಮತ್ತು ಬ್ಯಾಂಕ ಸಿಡ್ಡಿಂಗ ಕಡ್ಡಾಯವಾಗಿ ಮಾಡಿಸಿಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು,
ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅದ್ಯಕ್ಷರಾದ ಮಲ್ಲಮ್ಮಾ ಪಾಠೋಳಿ ಉದ್ಘಾಟಿಸಿದರು,
ಈದೆ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಂಬಾರ, ಪ್ರಮುಖರಾದ ಈರ್ಪಾನ ಜಮಾದಾರ,ಬಸೀರ ಚೌಧರಿ,ಕರೆಪ್ಪಾ ಹಿರೆಕುರಬರ,ಪಿರಪ್ಪಾ ನೈಕೊಡಿ,ಅಬಿಷೇಕ ರೋಡಗಿ,ಶಪಿಕ ಚೌಧರಿ,ಗಪೂರ ಪಠಾಣ,ಗಪೂರ ಮಸಳಿ,ಉಸ್ಮಾನ ,ಅಂಬು ರಾಠೋಡ,ಅಶೋಕ ದೇವಣಗಾಂವ,ರಮೇಶ ಚವ್ಹಾಣ ಹಾಗು ರೈತರು ಇದ್ದರು,
ಕರಜಗಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು ವರ್ಷಗಳಿಂದ ಎರಡು ಅವಷದಿಗಳು ಬರುತ್ತವೆ ರೋಗಕ್ಕೆ ತಕ್ಕಂತೆ ಅವಷದಿಗಳು ಕೊಡಬೇಕು ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಇನ್ನಿತರಹ ವಸ್ತುಗಳು ಬಂದರೆ ರೈತರಿಗೆ ತಿಳಿಸುವದಿಲ್ಲ ಸರ್ಕಾರದಿಂದ ಯಾವುದೆ ವಸ್ತುಗಳು ಬಂದರೆ ರೈತರಿಗೆ ಡಂಗುರ ಹೊಡೆದು ತಿಳಿಸಬೇಕು
ಗ್ರಾ, ಪಂ, ಉಪಾಧ್ಯಕ್ಷ ಇರ್ಫಾನ ಜಮಾದಾರ