ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

ಮುದ್ದೇಬಿಹಾಳ:ಡಿ.27: ಮುದ್ದೇಬಿಹಾಳ, ನಾಲತವಾಡ ತಾಳಿಕೋಟಿ ವ್ಯಾಪ್ತಿಯ ಬರುವ ತೋಗರಿ ಕೇಂದ್ರ ಉದ್ಘಾಟನೆ ಪ್ರತಿ ಸಲವೂ ರೈತರಿಗೆ ಸರಕಾರಗಳು ಅನ್ಯಾಯ ಮಾಡುತ್ತಲೇ ಬಂದಿವೆ ಅದರಂತೆ ಸಧ್ಯ ಪ್ರಸ್ತುತ ರಾಜ್ಯ ಸರಕಾರ ಡಿಸೆಂಬರ ಮೊದಲ ವಾರದಲ್ಲಿಯೇ ತೊಗರಿ ಕೇಂದ್ರಗಳನ್ನು ತೆರೆದು ರೈತರಿಗೆ ಮಾರಾಟ ಮಾಡುವ ಅನುಕೂಲ ಮಾಡಬೇಕಿತ್ತು. ಆದರೇ ಸಧ್ಯ ತಡವಾಗಿ ಕೇಂದ್ರಗಳನ್ನು ತೆರಯಲು ಪ್ರಾರಂಭಿಸಿರುವುದು ಕಾಟಾಚಾರದ ಸರಕಾರ ನಿಲುವುವಾಗಿದೆ ಇದರಿಂದ ರೈತರಿಗೆ ಅನ್ಯಾಯ ಮಾಡಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಹರಿಹಾಯ್ದರು.
ಪಟ್ಟಣದ ಇಲ್ಲಿನ ಎಪಿಎಂಸಿಯಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳ ಮಾರಾಟ ಸಹಕಾರಿ ಸಂಘದ ವತಿಯಿಂದ ಮುದ್ದೇಬಿಹಾಳ, ನಾಲತವಾಡ ತಾಳಿಕೋಟಿ ವ್ಯಾಪ್ತಿಯ ಬರುವ ತೋಗರಿ ಕೇಂದ್ರವನ್ನು ಆನ್ ಲೈನ ನೊಂದಣಿ ಮಾಡಿವ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸರಕಾರ ತಡವಾಗಿ ತೊಂಗರಿ ಕೇಂದ್ರಗಳನ್ನು ತೆರದಿರುವದರಿಂದ ಈ ಭಾಗದ ಬಹುತೇಕ ರೈತರಿಗೆ ಮಾರಾಟ ಮಾಡಲು ತೊಂದರೆಯಾಗುತ್ತದೆ ಕಾರಣ ರೈತರ ಹಿತದೃಷ್ಠಿಯಿಂದ ತೊಗರಿ ಮಾರಾಟದ ಅವಧಿಯನ್ನು ಜನೇವರಿ ಅಂತ್ಯದವರೆಗೆ ವಿಸ್ತರಣೆ ಮಾಡಿದರೇ ಸೂಕ್ತವಾಗುತ್ತದೆ ಜತೆಗೆ ಆನ್ ಲೈನ ಮೂಲಕ ತೊಗರಿ ಮಾರಾಟ ಮಾಡಲು ಅವಕಾಶವಿದ್ದು ಅದರಂತೆ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಅಲ್ಲದೇ ಈ ವೇಳೆ ಯಾವ ರೈತನಿಗೂ ಅನ್ಯಾಯವಾಗದಂತೆ ಮಾರಾಟಕ್ಕೆ ಸರಿತಿಯ ಮೇಲೆ ಖರಿಧಿಸುವಂತಾಗಬೇಕು ಅದಲ್ಲದೇ ಖರಿದಿಸಿ ತಕ್ಷಣವೇ ಆಯಾ ರೈತರ ಬ್ಯಾಂಕ ಖಾತೆಗೆ ನೇರವಾಗಿ ಜಮೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ತಾಲೂಕಾ ಒಕ್ಕಲುತನ ಹುಟ್ಟುವಳ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಮನೋಹರ ಮೇಟಿ,ರಮೇಶ ಕರಡ್ಡಿ, ವ್ಯವಸ್ಥಾಪಕ ಜಿ ಎಸ್ ಕೋನರಡ್ಡಿ, ಮಹಾಂತಗೌಡ ಪಾಟೀಲ ಇದ್ದರು.