ತೊಗರಿಬೇಳೆ ಸಬ್ಬಕ್ಕಿ ಸೊಪ್ಪಿನ ಪಲ್ಯ

1 ಕಪ್ ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು
ಮುಕ್ಕಾಲು ಕಪ್ ತೊಗರಿಬೇಳೆ
ಕಾಲು tsp ಅರಿಶಿಣ
1 ಕಪ್ ನೀರು
ಕಾಲು ಕಪ್ ಕಾಯಿ ತುರಿ
ಒಗ್ಗರಣೆಗೆ
3 ಚಮಚ ಎಣ್ಣೆ
ಸ್ವಲ್ಪ ಇಂಗು
1 ಚಮಚ ಸಾಸಿವೆ
1 ಚಮಚ ಜೀರಿಗೆ
2 ಕೆಂಪು ಮೆಣಸಿನಕಾಯಿ
ಮಾಡುವ ವಿಧಾನ
ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಾಗೇ ಬೇಳೆಯನ್ನೂ ಕೂಡ ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ, ಹೆಚ್ಚಿದ ಸೊಪ್ಪು ಮತ್ತು ನೀರನ್ನು ಹಾಕಿ ಕುಕ್ಕರಿನಲ್ಲಿ ಮೀಡಿಯಮ್ ಉರಿಯಲ್ಲಿ ೨ ಕೂಗು ಕೂಗಿಸಿ . ಕುಕ್ಕರ್ ಆರಿದ ಮೇಲೆ ಒಗ್ಗರಣೆಗಿಡಿ. ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಮೀಡಿಯಮ್ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಕಾದಮೇಲೆ ಸಾಸಿವೆ, ಇಂಗು, ಸಾಸಿವೆ ಚಟಗುಟ್ಟಿದ ಮೇಲೆ ಜೀರಿಗೆಯನ್ನು ಹಾಕಿ. ನಂತರ ಮುರಿದ ಒಣಮೆಣಸಿನಕಾಯಿ ತುಂಡನ್ನು ಹಾಕಿ ಕಲಕಿ . ಈಗ ಇದಕ್ಕೆ ಬೆಂದಿರುವ ಬೇಳೆ ಹಾಗು ಸೊಪ್ಪಿನ ಮಿಶ್ರಣವನ್ನೂ ಜೊತೆಗೆ ಉಪ್ಪು, ಕರಿಬೇವಿನ ಸೊಪ್ಪನ್ನೂ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಹಾಗೆ ಒಲೆಯ ಮೇಲಿಟ್ಟಿರಿ . ಐದು ನಿಮಿಷ ಆದಮೇಲೆ ಒಲೆಯನ್ನಾರಿಸಿ ಸೊಪ್ಪಿಗೆ ಕಾಯಿ ಹಾಕಿ ಕಲಸಿ. ಈಗ ನಿಮಗೆ ಆರೋಗ್ಯಕರ ಬೇಳೆ ಮತ್ತು ಸೊಪ್ಪಿನ ಪಲ್ಯ ತಿನ್ನಲು ಸಿದ್ಧ. ಇದನ್ನು ಸಾರಿನ ಜೊತೆ, ಚಪಾತಿ, ರೊಟ್ಟಿ ಜೊತೆಯಲ್ಲೂ ಸವಿಯಬಹುದು. ಬೇಳೆ ಬೇಯಿಸುವುದಕ್ಕೆ ತುಂಬಾ ನೀರನ್ನು ಹಾಕಬೇಡಿ