ತೊಗರಿಗೆ ಬೆಂಬಲ ಬೆಲೆ ಕೊಡಿ ಇಲ್ಲ ವಿಷ ಕೊಡಿ ಸರಕಾರಕ್ಕೆ ಆಗ್ರಹ

ಜೇವರ್ಗಿ:ಜ.3: ಸರ್ಕಾರ ತೊಗರಿ ಬೆಂಬಲ ಕೊಡಿ ಇಲ್ಲ ಕೊಡಿ ಎಂದು ಇಬ್ರಂ ಪಟೇಲ್ ಆಗ್ರಹಿಸಿದರು. ಆದರ್ಶ ಗ್ರಾಮ ಸಮಿತಿ ಯಾಳವಾರ ನೈತತ್ವದಲ್ಲಿ ಮಲ್ಲಾವಾದ ಏತ ನೀರಾವರಿ ಹಾಗೂ ತೊಗರಿ ಬೆಳೆ ಪರಿಹಾರ ಬಿಡುಗಡೆಗಾಗಿ ಮತ್ತು ವಿವಿಧ ಕಾಮಗಾರಿ ತಕ್ಷಣ ಪೂರ್ಣಗೊಳಿಸುವ ಸಲುವಾಗಿ ಸದರಿ ಧರಣಿ ಸತ್ಯಾಗ್ರಹ 22ನೇ ದಿನದತ್ತ ಸಾಗುತ್ತಿದೆ, ಇಂದು ಸದರಿ ಚಳುವಳಿಗೆ ಬೆಂಬಲವನ್ನು ವ್ಯಕ್ತಪಡಿಸಿ ಬಿಸಿಲು ನಾಡಿನ ರೈತ ಸಂಘ ಯಡ್ರಾಮಿ ತಾಲೂಕಿನ ಅಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳು ಬೆಂಬಲವನ್ನು ಘೋಷಿಸಿದರು ಹಾಗೂ ಪ್ರತಿದಿನ ಒಂದೊಂದು ಗ್ರಾಮಗಳು ಸದರಿ ಚಳುವಳಿಯಲ್ಲಿ ಭಾಗಿಯಾಗಿ ಒಂದು ದಿನ ಧರಣಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಆದರ್ಶ್ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್, ಬಾಬು ಪಾಟೀಲ್, ಬಿ ಎಚ್ ಮಾಲಿಪಾಟೀಲ್, ಗುರುನಾಥ್ ಸಾಹು, ರಾಜಾ ಪಟೇಲ್, ಹುಜೂರ್ ಪಟೇಲ್, ಫಜಲ್ ಬಾಬಾ, ಟಿಪ್ಪು ಸುಲ್ತಾನ್, ಅಜೀಸ್ ಪಟೇಲ್, ರಶೀದ್ ನಮಾಜಿ, ಗಪೂರ್ ಪಟೇಲ್, ಅಯ್ಯಪ್ಪ ಸಿರಸಿಗೆ, ಚಂದ್ರಶೇಖರ್ ರೆಡ್ಡಿ, ಹಾಗೂ ಹಲವು ಗ್ರಾಮದ ರೈತರು ಹಾಜರಿದ್ದರು