ತೈವಾನ್ ಗೆ ಯುದ್ಧ ಭೀತಿ

ನವದೆಹಲಿ,ಆ.೫-ಚೀನಾದ ’ಯುದ್ಧವಿಮಾನಗಳು ಮತ್ತು ಯುದ್ಧನೌಕೆಗಳು ತೈವಾನ್‌ನ ಜಲಸಂಧಿ ’ಮಧ್ಯದ ರೇಖೆ’ ದಾಟಿದ್ದು ಯದ್ದದ ಭೀತಿ ಎದುರಾಗಿದೆ. ಚೀನೀ ಯುದ್ಧ ವಿಮಾನಗಳು ಮತ್ತು ಹಡಗುಗಳು ತೈವಾನ್ ಜಲಸಂಧಿಯ ಮೂಲಕ ಹಾದು ಹೋಗುವ “ಮಧ್ಯಮ ರೇಖೆಯನ್ನು” ದಾಟಿರುವುದನ್ನು ತೈವಾನ್ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.ಚೀನಾದ ಕ್ರಮ ಪ್ರಚೋದನಕಾರಿಯಾಗಿದೆ ಎಂದು ಹೇಳಿದು,ತೈವಾನ್ ಯುದ್ದ ಬಯಸುವುದಿಲ್ಲ ಆದರೆ ಚೀನಾದ ನಡೆ ಆತಂಕ ಮೂಡಿಸಿದೆ ಎಂದು ಹೇಳಿದೆ.”ಚೀನೀ ಯುದ್ಧ ವಿಮಾನಗಳು ಮತ್ತು ಯುದ್ಧನೌಕೆಗಳ ಬಹುತಂಡಗಳಾಗಿ ತೈವಾನ್ ಜಲಸಂಧಿಯ ಸುತ್ತಲೂ ಅಭ್ಯಾಸ ನಡೆಸಿವೆ.
ಯುದ್ದ ಬಯಸಿಲ್ಲ:
ಚೀನಾದ ನಡೆ ಆತಂಕ ಮೂಡಿಸಿದೆ. ಆದರೆ ನಾವು ಯುದ್ದ ಬಯಸಿಲ್ಲ ಎಂದು ತೈವಾನ್ ಸ್ಪಷ್ಟಪಡಿಸಿದೆ. ತೈವಾನ್‌ಗೆ ಅಮೇರಿಕಾದ ಸೆನೆಟ್ ಮುಖ್ಯಸ್ಥರು ಭೇಟಿ ನೀಡಿದ ಸಮಯದಲ್ಲಿ ಚೀನಾ ಈ ನಡೆ ಅನುಸರಿಸಿದೆ.
ಅಮೇರಿಕಾ ಖಂಡನೆ:
ಚೀನಾದ ಆಕ್ರಮಕಾರಿ ನಡೆಯನ್ನು ಅಮೇರಿಕಾ ತೀವ್ರವಾಗಿ ಖಂಡಿಸಿದೆ. ಚೀನಾದ ನಡೆ “ಬೇಜವಾಬ್ದಾರಿ” ಕ್ರಮ ಎಂದು ಹೇಳಿದೆ.ತೈವಾನ್ ಜಲಸಂಧಿಯಾದ್ಯಂತ ಮತ್ತು ಅದರ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೀರ್ಘಕಾಲದ ಗುರಿಗೆ ವಿರುದ್ದವಾಗಿದೆ ಎಂದು ಅಮೇರಿಕಾ ಹೇಳಿದೆ.