ತೈವಾನ್‌ನಲ್ಲಿ ಪ್ರಬಲ ಭೂಕಂಪ: ಏಳು ಮಂದಿ ಸಾವು

ಧರೆಗುರುಳಿದ ಕಟ್ಟಡಗಳು

ತೈಪೆ,ಏ.೩-ತೈವಾನ್‌ನಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು ಜನದಟ್ಟಣೆಯ ವೇಳೆ ದ್ವೀಪ ಪ್ರದೇಶವಾದ ಹುವಾಲಿಯನ್ ಜನರನ್ನು ಬೆಚ್ಚಿ ಬೀಳಿಸಿದೆ. ಹಲವಾರು ಕಟ್ಟಡಗಳಿಗೆ ಹಾನಿಯಾಗಿದ್ದು ಕನಿಷ್ಠ ೭ ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಲಿದೆ.
ಇಂದು ಬೆಳಗ್ಗೆ ೮ ಗಂಟೆಗೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ಹುವಾಲಿಯನ್ ಆಗಿದ್ದು ಕಡಲಾಚೆಯ ಭೂಕಂಪನದ ಸಮೀಪವಿರುವ ತಾರೊಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಂಡೆಗಳ ಕುಸಿತದಲ್ಲಿ ಮೂವರು ಪಾದಯಾತ್ರಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ೭.೪ ರಷ್ಟು ದಾಖಲಾಗಿದೆ.
ಹುವಾಲಿಯನ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡ ಹೆಚ್ಚು ಹಾನಿಯಾಗಿದೆ. ಮೊದಲ ಮಹಡಿ ಕುಸಿದಿದೆ ಮತ್ತು ಉಳಿದ ಮಹಡಿಗಳು ೪೫-ಡಿಗ್ರಿ ಕೋನದಲ್ಲಿ ವಾಲಿದೆ. ರಾಜಧಾನಿ ತೈಪೆಯಲ್ಲಿ, ಹಳೆಯ ಕಟ್ಟಡಗಳಿಂದ ಮತ್ತು ಕೆಲವು ಹೊಸ ಕಚೇರಿ ಸಂಕೀರ್ಣಗಳಲ್ಲಿ ಕಟ್ಟಡಗಳಿಗೆ ಹೆಚ್ಚು ಹಾನಿಯಾಗಿದೆ.
ಕೆಲವು ಕಟ್ಟಡದ ಸ್ಥಳಗಳಿಂದ ಅವಶೇಷಗಳು ಬಿದ್ದಿವೆ. ಶಾಲೆಗಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಹಳದಿ ಸುರಕ್ಷತಾ ಹೆಲ್ಮೆಟ್ ಸಜ್ಜುಗೊಳಿಸಲಾಗಿದೆ. ದಕ್ಷಿಣದ ನಗರದಲ್ಲಿ ಹಲವಾರು ಕಟ್ಟಡಗಳನ್ನು ಹಾನಿಯಾಗಿದ್ದು ಮತ್ತು ದಕ್ಷಿಣ ಜಪಾನಿನ ದ್ವೀಪಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ, ಇದರಿಂದ ಜನರು ಭಯದಿಂದ ಬದುಕುವ ವಾತಾವರಣ ಸೃಷ್ಠಿಯಾಗಿದೆ

ಥೈವಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಬೃಹತ್ ಕಟ್ಟಡ ವಾಲಿಕೊಂಡಿರುವುದು.

ರೈಲು ಸೇವೆ ಸ್ಥಗಿತ:
ತೈಪೆಯಲ್ಲಿ ಸುರಂಗಮಾರ್ಗದ ರೈಲು ಸೇವೆಯನ್ನು ದ್ವೀಪದಾದ್ಯಂತ ಸ್ಥಗಿತಗೊಳಿಸಲಾಗಿದೆ. ಆದರೆ ರಾಜಧಾನಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಮಕ್ಕಳು ಶಾಲೆಗೆ ಹೋಗುತ್ತಾರೆ ಮತ್ತು ಬೆಳಗಿನ ಪ್ರಯಾಣ ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೈವಾನ್‌ನ ಭೂಕಂಪದ ಮೇಲ್ವಿಚಾರಣಾ ಬ್ಯೂರೋದ ಮುಖ್ಯಸ್ಥ ವು ಚಿಯೆನ್-ಫು, ಚೀನಾದ ಕರಾವಳಿಯಲ್ಲಿರುವ ತೈವಾನೀಸ್ ನಿಯಂತ್ರಿತ ದ್ವೀಪ ಕಿನ್‌ಮೆನ್‌ನಷ್ಟು ದೂರದಲ್ಲಿ ಪರಿಣಾಮ ಪತ್ತೆಹಚ್ಚಲಾಗಿದೆ ಎಂದು ಹೇಳಿದ್ದಾರೆ.

ಸುನಾಮಿ ಭೀತಿ ಸಾಧ್ಯತೆ
ಭೂಕಂಪ ಸಂಭವಿಸಿದ ೧೫ ನಿಮಿಷಗಳ ನಂತರ ಯೋನಾಗುನಿ ದ್ವೀಪದ ಕರಾವಳಿಯಲ್ಲಿ ೩೦ ಸೆಂಟಿಮೀಟರ್ ಅಂದರೆ ಸುನಾಮಿ ಅಲೆ ಪತ್ತೆಯಾಗಿದೆ, ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಮಿಯಾಕೊ ಮತ್ತು ಯೆಯಾಮಾ ದ್ವೀಪಗಳ ತೀರಕ್ಕೂ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ .ಜಪಾನ್‌ನ ಸ್ವಯಂ ರಕ್ಷಣಾ ಪಡೆ ಓಕಿನಾವಾ ಪ್ರದೇಶದ ಸುತ್ತ ಸುನಾಮಿ ಪ್ರಭಾವದ ಬಗ್ಗೆ ಮಾಹಿತಿ ಸಂಗ್ರಹಿಸಲು ವಿಮಾನ ಕಳುಹಿಸಿದ್ದು ಅಗತ್ಯವಿದ್ದರೆ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ
ಪ್ರಬಲ ಭೂಕಂಪನದಿಂದ ಎರಡು ದಕ್ಷಿಣ ದ್ವೀಪಗಳು ತತ್ತರಿಸಿ ಹೋಗಿವೆ. ತೈವಾನ್‌ನ ಹುವಾಲಿಯನ್ ಪ್ರಬಲ ಭೂಕಂಪದಿಂದ ಅನೇಕ ಕಟ್ಟಡಗಳಿಗೆ ಹಾನಿಹಾನಿದೆ. ಹಳೆಯ ಕಟ್ಟಡಗಳು ನೆಲಸಮವಾಗಿವೆ.