ತೈಲ ಬೆಲೆ ಏರಿಕೆಗೆ ಖಂಡನೆ ಯುವ ಕಾಂಗ್ರೆಸ್ ನಿಂದ ಸೈಕಲ್ ಕೊಡಿ ಅಭಿಯಾನ

ದಾವಣಗೆರೆ. ಜೂ.೧೧;  ದೇಶವ್ಯಾಪ್ತಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ನಗರದ ಅಶೋಕ ಚಿತ್ರಮಂದಿರದ ಬಳಿಯಿರುವ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸುಮಾರು 12 ಕ್ಕಿಂತ ಅತೀಹೆಚ್ಚು ಬೈಕುಗಳನ್ನು ಮಾರಾಟಕ್ಕೆ ಹಾಗೂ ಎಕ್ಸ್‌ಚೇಂಜ್‌ ಮೇಳ ಆಯೋಜಿಸಲಾಗಿತ್ತು ಬೈಕು ಕೊಂಡುಕೊಳ್ಳಿ ಬದಲಾಗಿ ಸೈಕಲ್ ಗಳನ್ನು ಒದಗಿಸಿ ಎಂಬ ಘೋಷಣೆಗಳನ್ನು ಕೂಗಲಾಯಿತು.2014ರ ಚುನಾವಣೆ ಸಂದರ್ಭದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತಿ ಕಡಿಮೆ ದರದಲ್ಲಿ ಪೆಟ್ರೋಲ್ ಮಾಡಬೇಕು ಪ್ರತಿ ಲೀಟರಿಗೆ 30 ರೂಪಾಯಿ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟು ಸರ್ಕಾರ ರಚಿಸಿದರು ಇವರಿಗೆ ಯೋಗಗುರು ಬಾಬಾ ರಾಮದೇವ್ ಕೂಡ ಸಾಥ್ ನೀಡಿದರು ಬಿಜೆಪಿಯ ಅನೇಕ ನಾಯಕರು,ಸ್ಮೃತಿ ಇರಾನಿ  ಅವರು ದೇಶದ ಅಂದಿನ ಪ್ರಧಾನಮಂತ್ರಿ  ಮನಮೋಹನ್ ಸಿಂಗ್ ಅವರನ್ನು ಬಳೆ ಕೊಡುವ ಮುಖಾಂತರ ನಿಂದಿಸುತ್ತಿದ್ದರು ಆಗ ಪೆಟ್ರೋಲ್ ಬೆಲೆ 60 ರೂಪಾಯಿ ಇರುತ್ತಿತ್ತು , ಇಂದು ಪೆಟ್ರೋಲಿನ ಬೆಲೆ 102 ರೂಪಾಯಿ ಏರಿಕೆಯಾಗಿದೆ,  ಡೀಸೆಲ್ ಬೆಲೆ 96 ರೂಪಾಯಿ ಏರಿಕೆಯಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಕ್ತಾರರಾದ ಮೈನುದ್ದೀನ್ ಹೆಚ್ ಜೆ,ಯುವ ಕಾಂಗ್ರೆಸ್ಸಿನ ಉಪಾಧ್ಯಕ್ಷ ಸಾಗರ್ ಎಲ್ ಎಂ ಹೆಚ್, ಸಂದೀಪ್ ಅಣಬೇರು, ಮೊಹಮ್ಮದ್ ಸಾಧಿಕ್ ಸದ್ದಾಮ್, ಮೊಹಮ್ಮದ್ ವಾಜಿದ್ ಇತರರಿದ್ದರು