ತೇಲಂಗಾಣ ಗಡಿ ತಾಂಡಾಗಳ ಮೇಲೆ ಅಬಕಾರಿ ದಾಳಿ: ಕಳ್ಳಭಟ್ಟಿ ಸರಾಯಿ ಜಪ್ತಿ

ಚಿಂಚೋಳಿ,ಏ.20- ತೇಲಂಗಾಣ ಗಡಿಭಾಗದ ಸಂಗಾಪೂರ ತಾಂಡಾ ಮತ್ತು ಶ್ರೀನಗಪೆದ್ದ ತಾಂಡಾದಲ್ಲಿ ಚಿತ್ತಾಪೂರ ಮತ್ತು ತೇಲಂಗಾಣದ ಅಬಕಾರಿ ಅಧಿಕಾರಿಗಳ ತಂಡ ನಿನ್ನೆ ಏ.19ರಂದು ಜಂಟಿಯಾಗಿ ಕಾರ್ಯಚರಣೆ ಕೈಗೊಂಡು ಕಳ್ಳಭಟ್ಟಿ ಸರಾಯಿ, ಬೆಲ್ಲದ ಕೋಳೆ, ನವಸಾಗರ ಉಂಡೆಗಳು, ಬಕೇಟುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶ್ವಿಯಾಗಿದೆ.
ಸಂಗಾಪೂರ ತಾಂಡಾದ ರವಿ ಲಾಲಾಸಾಬ ಪವಾರ ಎಂಬವವರ ಮೆನೆಯ ಮೇಲೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳ ತಂಡ, 5 ಲೀಟರ್ ಕಳ್ಳಭಟ್ಟಿ ಸರಾಯಿ, 40 ಲೀಟರ ಬೆಲ್ಲದ ಕೋಳೆ, ನವಸಾಗರ ಉಂಡೆ, 2 ಬಕೇಟು ಗಳನ್ನು ಜಪ್ತಿಮಾಡಲಾಗಿದ್ದು, ದಾಳಿಯ ವೇಲೆ ಆರೋಪಿ ರವಿ ಪವಾರ ತಲೆ ಮರೆಸಿಕೊಂಡಿರುತ್ತಾನೆ,
ಶ್ರೀನಗಪೆದ್ದ ತಾಂಡಾದ ಪುಕಿಬಾಯಿ ಗಂಡ ಶೆಟ್ಟಿ ಅವರ ಮನೆಯಲ್ಲಿ 5 ಲೀಟರ್ ಕಳ್ಳಭಟ್ಟಿ ಸರಾಯಿ, 30 ಲೀಟರ್ ಬೆಲ್ಲದ ಕೋಳೆ, ಬಕೆಟ್ ಮತ್ತು ನವಸಾಗರ ಉಂಟೆಗಳನ್ನು ಜಪ್ತಿಮಾಡಿದ್ದು, ಪರಾರಿಯಾಗಿರುವ ಈ ಇಬ್ಬರು ಆರೋಪಿಗಳ ವಿರದ್ದ ಚಿಂಚೋಳಿ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜಂಟಿ ದಾಳಿಯಲ್ಲಿ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡದಲ್ಲಿ ನಾಗರಾಜ, ಮಹೇಶ, ರಾಹುಲ ನಾಯಕ್, ಮೊಹ್ಮದ ಹುಸೇನ, ರಾಮಕೃಷ್ಣ, ಗೌರಿ ಶಂಕರ, ಶಿವರಾಜ ಮತ್ತು ಗುರುನಾಥ ಹಾಗೂ ತೇಲಂಗಾಣದ ಅಬಕಾರಿ ಅಧಿಕಾರಿಗಳ ತಂಡ ಭಾಗವಹಿಸಿದ್ದವು.