
ಹಿರಿಯೂರು ಮಾ. 17; ಹಿರಿಯೂರು ನಗರದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಜಾತ್ರೆ ಕಳೆದ ಫೆ. 7 ರಂದು ನಡೆದಿದ್ದು ಪ್ರಥಮ ಬಾರಿಗೆ ರೂ. 6,18,840 ಹಣ ಸಂಗ್ರವಾಗಿದೆ. ತಾಲ್ಲೂಕು ತಹಶೀಲ್ದಾರ್ ಮತ್ತು ಮುಜರಾಯಿ ಅಧಿಕಾರಿ ಪ್ರಶಾಂತ್ ಕೆ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಹುಂಡಿ ಹಣವನ್ನು ಏಣಿಕೆ ಮಾಡಲಾಗಿದೆ.ಬಹಳ ವರ್ಷದ ನಂತರ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಭಕ್ತರಿಂದ ಅಪಾರ ಹಣ ಸಂಗ್ರಹ ವಾಗಿದೆ.