ತೇರು ಮಲ್ಲೇಶ್ವರ ಸ್ವಾಮಿ ಶಿವ ಧನಸ್ಸು ಕಟ್ಟಡದ ಭೂಮಿ ಪೂಜೆ

 ಹಿರಿಯೂರು. ಮೇ.23-ಹಿರಿಯೂರು ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಾಲಯದ ಶಿವ ಧನಸ್ಸಿನ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಡಿ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್, ದೇವಸ್ಥಾನದ ಆಡಳಿತಾಧಿಕಾರಿ ಸ್ವಾಮಿ, ಅರ್ಚಕರಾದ ಮಲ್ಲೇಶ್ ಆಚಾರ್ಯ,  ಜಿಲ್ಲಾ  ಪಂಚಾಯತಿ ಮಾಜಿ ಸದಸ್ಯರಾದ ಆರ್ ನಾಗೇಂದ್ರ ನಾಯ್ಕ್,  ಕೆಪಿಸಿಸಿ ಸದಸ್ಯರಾದ ಕಂದೀಕೆರೆ ಸುರೇಶ್ ಬಾಬು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ ರಮೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜನಿ ಯಾದವ್, ಸದಸ್ಯರಾದ ವಿಠ್ಠಲ್ ಪಾಂಡುರಂಗ, ಜಗದೀಶ್, ರತ್ನಮ್ಮ, ಮುಖಂಡರಾದ ಪಿ. ಎಸ್  ಸಾದತ್ಉಲ್ಲ,  ದಾದಾಪೀರ್, ಸೈಯದ್ ಸಲಾಉದ್ದೀನ್, ಜಗದೀಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.