ತೇರುಗಡ್ಡೆಗೆ ವಿಶೇಷ ಪೂಜೆ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 12: ಪಟ್ಟಣದ ಐತಿಹಾಸಿಕ ಶ್ರೀ ಪೇಟೆ ಬಸವೇಶ್ವರ ರಥೋತ್ಸವವದ ಪೂರ್ವ ಸಿದ್ದತೆಯಾಗಿ ರಥದ ತೇರುಗಡ್ಡಯನ್ನು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅದನ್ನು ಹೊರ ತೆಗೆಯಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಯೂಗಾದಿ ಹಬ್ಬದ ದಿನದಂದು ಶ್ರೀ ಪೇಟೆ ಬಸವೇಶ್ವರ ರಥೋತ್ಸವವು ಪಟ್ಟಣದ ಪ್ರಮುಖ ಕೇಂದ್ರವಾದ ಅನಂದ ಬಜಾರ್‍ನಲ್ಲಿ ಜರುಗಲಿದೆ. ರಥೋತ್ಸವದ ಸಾನಿಧ್ಯವನ್ನು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗುವುದು ಈ ಸಂದರ್ಭದಲ್ಲಿ ಪಟ್ಟಣದ ಎಲ್ಲಾ ಸಮಾಜ ಮುಖಂಡರು ಭಾಗಿಯಾಗಿ ರಥೋತ್ಸವವನ್ನು ಅದ್ದೂರಿಯಾಗಿ ನೇರವೇರಿಸುವರು.
ಅದರ ಪ್ರಥಮ ಭಾಗವಾಗಿ ರಥದ ಅಲಂಕಾರದ ಸಿದ್ದತೆ ಹಾಗೂ ಕಂಕಣ ಕಟ್ಟುವ ಕಾರ್ಯದ ಅಂಗವಾಗಿ ರಥಧ ಗಡ್ಡೆಯನ್ನು ಹೊರ ತೆಗೆದರು ಈ ಸಂದರ್ಭದಲ್ಲಿ ವೀರಶೈವ ತರುಣ ಸಂಘದ ಅಧ್ಯಕ್ಷರಾದ ಗಡಂಬ್ಲಿ ಚನ್ನಪ್ಪ, ಅನಂದ ಬಜಾರ್‍ನ ಎಲ್ಲಾ ಗಣ್ಯಮಾನ್ಯರಾದ ಹಗರಿ ಬಸವರಾಜಪ್ಪ, ಮೇಲು ಸೀಮೆ ಶಂಕ್ರಪ್ಪ, ಇತರ ಗಣ್ಯರ ಉಪಸ್ಥಿತಿಯಲ್ಲಿ ಜರುಗಿತು.