ತೇಜಸ್ ವಿಶ್ವಸ್ಥ ಮಂಡಳಿ : ತಂಪಾದ ಶುದ್ಧ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ

ರಾಯಚೂರು,ಏ.೩- ನಗರದ ಜನ ನಿಬಿಡ ಪ್ರದೇಶವಾದ ಚಂದ್ರಮೌಳೀಶ್ವರ ವೃತ್ತದಲ್ಲಿ ಸಾರ್ವಜನಿಕರ ದಾಹ ತಣಿಸಲು ತೇಜಸ್ ವಿಶ್ವಸ್ಥ ಮಂಡಳಿ ವತಿಯಿಂದ ತಂಪಾದ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಆರಂಭಿಸಲಾಯಿತು.
ಮಂಡಳಿಯ ಕಾರ್ಯದರ್ಶಿಯಾದ ನಾಗರಾಜ ಆದೋನಿ ಅರವಟಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿತೃಷಿಗಳಾದ ಗಣೇಶ್, ಚಂದ್ರಶೇಖರ, ಶರ್ವಿಲ್ ಭಟ್, ಸೀನಪ್ಪ ಇನ್ನಿತರರು ಉಪಸ್ಥಿತರಿದ್ದರು.