ತೇಜಸ್ ಯುದ್ಧ ವಿಮಾನಕ್ಕೆ ವಿಶ್ವದರ್ಜೆ ಸಾಮರ್ಥ್ಯ

ಕೊಯಮತ್ತೂರು,ಸೆ.೨೩- ಲಘು ಯುದ್ಧ ವಿಮಾನ ತೇಜಸ್ ವಿಶ್ವದರ್ಜೆಯ ಸಾಮರ್ಥ್ಯ ಹೊಂದಿರುವ ವಿಮಾನ ಎಂದು ವಾಯುಪಡೆಯ ೪೫ ಸ್ಕ್ವಾರ್ಡನ್‌ಗಳ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಸಯಮಂತರಾಯ್ ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ಸಂದರ್ಶ ನೀಡಿದ ಅವರು ಸುಲಾರ್ ವಾಯುನೆಲೆ ದಕ್ಷಿಣ ಪರ್ಯಾಯ ದ್ವೀಪದ ಮಧ್ಯಭಾಗದಲ್ಲಿದ್ದು, ನಾವು ಉತ್ತರ ಮತ್ತು ಪೂರ್ವಕ್ಕೆ ಭೂಪ್ರದೇಶವನ್ನು ಮಾತ್ರವಲ್ಲದೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗದ ಸಮುದ್ರಗಳ ಮೇಲೆಯೂ ತಲುಪಬಹುದಾಗಿದೆ. ಹೀಗಾಗಿ, ತೇಜಸ್ ಯುದ್ಧ ವಿಮಾನ ದೇಶಾದ್ಯಂತ ನಿಯೋಜಿಸಲು ಸಮರ್ಥವಾಗಿದೆ ಎಂದು ಪ್ರತಿಪಾದಿಸಿದರು. ಯುದ್ಧ ವಿಮಾನ ತೇಜಸ್ ರಣಭೂಮಿಯಲ್ಲಿ ಆಕ್ರಮಣಕಾರಿ ದಾಳಿ ನಡೆಸಲು ಪ್ರಮುಖಪಾತ್ರ ವಹಿಸಲಿದೆ ಎಂದು ವಿವರಿಸಿದ ಅವರು, ಇದು ವಿಶ್ವದರ್ಜೆ ಶ್ರೇಣಿಯ ಕ್ಷಿಪಣಿಗಳಾಗಿವೆ.
ಈ ವಿಮಾನದಲ್ಲಿ ೧ ಸಾವಿರ ಪೌಂಡ್ ಬಾಂಬ್‌ಗಳನ್ನು ಹೊತ್ತೊಯ್ದು ಶತ್ರುಪಾಳಯವನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು. ಗ್ರೂಪ್ ಕ್ಯಾಪ್ಟನ್ ಎಂ. ಸುರೇಂದ್ರನ್ ಮಾತನಾಡಿ, ತೇಜಸ್ ಯುದ್ಧ ವಿಮಾನ ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ವಾಯುಪಡೆ ನೀಡುವ ಸವಾಲನ್ನು ದಿಟ್ಟವಾಗಿ ಎದುರಿಸಲಿದೆ ಎಂದು ಹೇಳಿದರು.