ತೇಜಸ್ವಿ ನಿರ್ದೇಶನ ಚಿತ್ರಕ್ಕೆ ಶಿವಣ್ಣ ನಾಯಕ

 “ವೇದ” ಚಿತ್ರದ ಯಶಸ್ಸಿನ ಬೆನ್ನಲ್ಲೇ ಶಿವರಾಜ್ ಕುಮಾರ್  ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರು.

“ಮಜಾಟಾಕೀಸ್” ಹಾಗೂ ಸೃಜನ್ ಲೋಕೇಶ್ ಅಭಿನಯದ “ಎಲ್ಲಿದೆ ಇಲ್ಲಿತನಕ” ಚಿತ್ರದ ನಿರ್ದೇಶಕ ತೇಜಸ್ವಿ ಕೆ ನಾಗ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.‌

ನಿರ್ದೇಶಕ ತೇಜಸ್ವಿ ಕೆ ನಾಗ್ ಮಾತನಾಡಿ, ಶಿವಣ್ಣ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜಕುಮಾರ್  ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು  ತಿಳಿಸಿದ್ದಾರೆ.