ತೇಜಸ್ವಿನಿ ತಾಂತ್ರಿಕ ವಿಜ್ಞಾನ ಸಂಸ್ಥೆ ಅಧ್ಯಕ್ಷೆ

ನವದೆಹಲಿ,ಸೆ.೨:ಕೇಂದ್ರದ ಮಾಜಿ ಸಚಿವ ದಿ. ಅನಂತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್‌ಕುಮಾರ್ ಅವರನ್ನು ಪಶ್ಚಿಮ ಬಂಗಾಳದ ಶಿಬಪುರ್‌ನಲ್ಲಿರುವ ಭಾರತೀಯ ತಾಂತ್ರಿಕ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ (ಎನ್‌ಐಟಿಎಸ್‌ಇಆರ್)ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಸಂಬಂಧ ಕೇಂದ್ರದ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಪಶ್ಚಿಮಬಂಗಾಳದಲ್ಲಿರುವ ಶಿಬುಪುರದಲ್ಲಿರುವ ಎನ್‌ಐಟಿಎಸ್‌ಇಆರ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ತೇಜಸ್ವಿ ಅನಂತ್‌ಕುಮಾರ್‌ರವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇವರ ಅಧಿಕಾರಾವಧಿ ೩ ವರ್ಷಗಳಾಗಿರುತ್ತದೆ.