ತೇಗಲತಿಪ್ಪಿ, ತೋಟದಗೆ ವಿಶೇಷ ಸನ್ಮಾನ

ಕಲಬುರಗಿ,ಡಿ.4-ಕಲಬುರಗಿ ಗೆಳೆಯರ ಬಳಗದ ವತಿಯಿಂದ ಪ್ರಿಯದರ್ಶಿನಿ ಇಂದಿರಾ ಗಾಂಧಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈಶ್ವರ ಇಂಗಿನ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ್ ಮತ್ತು ಶಿವರಾಜ ಅಂಡಗಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಪತ್ರಕರ್ತ ಸಂಗಮನಾಥ ರೇವತಗಾಂವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ತೋಟದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಶನ್ಸ್ ಸಂಘದ ಪಧಾದಿಕಾರಿಗಳಾದ ಗುರುಪಾದಯ್ಯ ಮಠ, ಅನೀಲಕುಮಾರ ಎಸ್. ಹುಮನಾಬಾದ, ರಮೇಶಲಾಲ್ ಬುಂದ್ರೇ, ರಾಚಯ್ಯ ಸಿ. ಪತ್ರೆ, ಅನೀಲಕುಮಾರ, ಅರುಣಕುಮಾರ ತೆಗನೂರ, ಪ್ರಕಾಶ ಎಂ. ಶೇರಖಾನ್, ಮಹಮ್ಮದ್ ಅಫ್ಸರ್ ಪಟೇಲ್, ಶರಣು ಕಟ್ಟಿಮನಿ, ಶಿವಕುಮಾರ ಮಾಲಿ ಪಾಟೀಲ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಶಿವಕುಮಾರ ರಾಗಿ, ಎಚ್.ಎಸ್. ಬರಗಾಲಿ, ಹುಣಚಪ್ಪ ಪೂಜಾರಿ, ಸಂಗೀತ ಕಲಾವಿದರಾದ ಶಿವಶಂಕರ್ ಬಿ. ಅವರು ಪ್ರಾರ್ಥನಾ ಗೀತೆ ನಡೆಸಿಕೊಟ್ಟರು, ಮಲ್ಲಪ್ಪ ದೊಡ್ಡಿ ಕಾರ್ಯಕ್ರಮ ನಿರೂಪಿಸಿದರು, ವಿಶ್ವನಾಥ ತೋಟ್ನಳ್ಳಿ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.