
ಬೇಕಾಗುವ ಪದಾರ್ಥಗಳು:
ಶುಂಠಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ – ೨ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಚಿರೋಟಿರವೆ – ಅರ್ಧ ಲೋಟ
ಕರಿಬೇವು – ಸ್ವಲ್ಪ
ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – ೧
ತೆಳುಅವಲಕ್ಕಿ (ನೀರಿನಲ್ಲಿ ಹಿಂಡಿದ ತಕ್ಷಣ) – ಅರ್ಧ ಲೋಟ
ವಿಧಾನ: ಮೇಲಿನ ಪದಾರ್ಥಗಳನ್ನೆಲ್ಲಾ ಸೇರಿಸಿ, ನೀರು ಹಾಕಿ ಕಲೆಸಿ, ಉಂಡೆಮಾಡಿ, ಕಾದ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಕರಿಯಬೇಕು.