ತೆಲುಗು ಚಿತ್ರದಲ್ಲಿ ನಾಯಕನಾಗಿ ವಸಿಷ್ಠ ಸಿಂಹ

ಬೆಂಗಳೂರು, ಸೆ 11 – ಅಪರೂಪದ ಶಾರೀರ ಹಾಗೂ ಕಟ್ಟುಮಸ್ತಾದ ಮೈಕಟ್ಟು ಹೊಂದಿರುವ ನಟ ವಸಿಷ್ಠ ಸಿಂಹ ತೆಲುಗು ಚಿತ್ರದಲ್ಲಿ ನಾಯಕನಾಗಿ ಮಿಂಚಲಿದ್ದಾರೆ.

ಕನ್ನಡದಲ್ಲಿ ನಾಯಕನಾಗಿ ಮಾತ್ರವಲ್ಲದೆ ಖಳನಟನಾಗಿ ಮಿಂಚಿ ಅಭಿಮಾನಿಗಳ ಮನಗೆದ್ದಿರುವ ವಸಿಷ್ಠ ಸಿಂಹ, ಕೆಲವು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.

ಈಗಾಗಲೇ ತೆಲುಗು ಸಿನಿಮಾರಂಗಕ್ಕೆ ಗಾಯಕನಾಗಿ ಪರಿಚಯರಾದ ನಟ ವಸಿಷ್ಟ ಸಿಂಹ ಇದೀಗ ನಾಯಕನಾಗಿ ಪರಿಚಯರಾಗಲಿದ್ದಾರೆ.
ತೆಲುಗಿನ ‘ಓದೆಲ ರೈಲ್ವೆ ಸ್ಟೇಷನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಟೈಟಲ್ ಪೋಸ್ಟರ್ ಈಗ ರಿಲೀಸ್ ಆಗಿದೆ. ಅಲ್ಲದೆ ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ ಎನ್ನಲಾಗಿದೆ