ತೆಲುಗಿನಲ್ಲಿ ಕನ್ನಡದ ಕಂಪು “ಚಿಲ್ ಬ್ರೋ” ನಲ್ಲಿ ರೂಪಿಕಾ ಮಿಂಚು

  • ಚಿಕ್ಕನೆಟಕುಂಟೆ ಜಿ ರಮೇಶ್

ಕನ್ನಡದ ಒಂದೊಂದೇ ಪ್ರತಿಭೆಗಳು ಪರಭಾಷೆಯತ್ತ ಮುಖ ಮಾಡುತ್ತಿವೆ. ಹಾಗಂತ ಕನ್ನಡದಲ್ಲಿ ಅವಕಾಶ ಇಲ್ಲ ಅಂತ ಏನು ಇಲ್ಲ..
ಕನ್ನಡದಲ್ಲಿ ನಟಿಸುತ್ತಲೇ ಪರಭಾಷೆಗಳಲ್ಲಿ ಮಿಂಚು ಹರಿಸಲು ಮುಂದಾಗಿದ್ದಾರೆ. ನಿನ್ನೆ ಮೊನ್ನೆ ವಸಿಷ್ಠ‌‌ ಸಿಂಹ ತೆಲುಗು ಚಿತ್ರರಂಗದಲ್ಲಿ ಒಟ್ಟೊಟ್ಟಿಗೆ ಎರಡು ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು . ಈಗ ಈ ಸಾಲಿಗೆ ನಟಿ ರೂಪಿಕಾ ಸೇರ್ಪಡೆ.
ತೆಲುಗಿನ “ಚಿಲ್ ಬ್ರೋ” ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುವ ಜೊತೆಗೆ ಕನ್ನಡದ ಕಂಪು ಪಸರಿಸಲು ಮುಂದಾಗಿದ್ದಾರೆ.
ನಿನ್ನೆಯಷ್ಟೇ “ಚಿಲ್ ಬ್ರೋ “ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಒಂದಷ್ಟು ಕುತೂಹಲ ಮೂಡಿಸಿದೆ.
ತ್ರಿಕೋನ ಪ್ರೇಮಕಥೆಯ “ಚಿಲ್ ಬ್ರೋ” ಚಿತ್ರವನ್ನು ಕುಂಚಮ್ ಶಂಕರ್ ನಿರ್ದೇಶನ ಮಾಡುತ್ತಿದ್ದು ಶ್ರೀ ನುಚಮ್ ಬೇಟಿ ಬಂಡವಾಳ ಹಾಕಿದ್ದಾರೆ‌.
ಯುವ ನಟರಾದ ಪವನ್ ತೇಜ ಮತ್ತು ಸೂರ್ಯ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಚಿಲ್ ಬ್ರೋ” ಸಂಗೀತ ಮಯ‌ ಚಿತ್ರ ಎನ್ನುತ್ತಿದೆ ಚಿತ್ರತಂಡ.ಈ ಚಿತ್ರದ ಮೂಲಕ ಇದುವರೆಗೂ ನೋಡದ ರೂಪಿಕಾ ಅವರನ್ನು ಈ ಚಿತ್ರದಲ್ಲಿ ನೋಡಬಹುದು ವಿಶ್ವಾಸ ರೂಪಿಕಾ ಅವರದು
ಹಳ್ಳಿಯಲ್ಲಿರುವ ಹುಡುಗಿ ಹೈದ್ರಾಬಾದ್ ಗೆ ಬಂದು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಹುಡುಗಿ. ಅಲ್ಲಿ ನಡೆಯುವ ಪರಿಚಯ ಸ್ನೇಹ ಡ್ರಾಮಾ ಪ್ರೀತಿ ಎಲ್ಲದರ ಮಿಶ್ರಣ ಚಿತ್ರದ ತಿರುಳು. ಕಮರ್ಷಿಯಲ್ ಅಂಶಗಳಿರುವ ಮುದ್ದಾದ ತ್ರಿಕೋನ ಪ್ರೇಮಕತೆಯನ್ನು ನಿರ್ದೇಶಕರು ತೆರೆಯ ಮೇಲೆ ಹೇಳುವ ಪ್ರಯತ್ನ ಮಾಡಿದ್ದಾರೆ.
ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನನ್ನದು ಎನ್ನುತ್ತಾರೆ ರೂಪಿಕಾ.
ತ್ರಿಕೋನ ಪ್ರೇಮಕಥೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿ. ಆದರೆ ನಮ್ಮ ಚಿತ್ರದಲ್ಲಿ ಅದೇ ಒಂದು ತಿರುವು ಅದು ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ.
ಚಿತ್ರದಲ್ಲಿ ಭಾವಾಭಿನಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಈ ಮೂಲಕ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ಅವರದು.
ಕಳೆದ ಒಂದು ತಿಂಗಳಿನಿಂದ ಹೈದ್ರಾಬಾದ್ ನಲ್ಲಿ ಇದ್ದೇನೆ ಪ್ರತಿಯೊಂದಕ್ಕೂ ತಯಾರು ಮಾಡುತ್ತಿದ್ದಾರೆ. ಪ್ರತಿದಿನ ಕಾರ್ಯಗಾರ ಸ್ಕ್ರಿಪ್ಟ್ ರೈಡಿಂಗ್ ನಡೆಯುತ್ತಿದೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸವೂ ಅವರಿಗಿದೆ

35 ದಿನಗಳ ಗುರಿ
“ಚಿಲ್ ಬ್ರೋ” ಚಿತ್ರಕ್ಕೆ ಇತ್ತೀಚಿಗಷ್ಟೇ ಮುಹೂರ್ತ ನಡೆದಿದ್ದು ಈ ತಿಂಗಳ 25ರ ಬಳಿಕ ಚಿತ್ರೀಕರಣ ನಡೆಯಲಿದೆ. ಸರಿ ಸುಮಾರು 30ರಿಂದ 35 ದಿನಗಳ ಕಾಲ ಚಿತ್ರೀಕರಣ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

ತೆಲುಗಿಗೆ ರೂಪಿಕಾ
“ದಾಡಿ” ಎನ್ನುವ ಇನ್ನೊಂದು ಚಿತ್ರ ಮಾಡುತ್ತಿದ್ದೇನೆ ಆದರೆ ಪೂರ್ಣ ಪ್ರಮಾಣದ ನಾಯಕಿ ಹಾಗು ಕಮರ್ಷಿಯಲ್ ಆಗಿ “ಚಿಲ್ ಬ್ರೋ ಮೊದಲ ಚಿತ್ರ ಎನ್ನುತ್ತಾರೆ ರೂಪಿಕಾ.ಈ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ
.