
ಸತತ ಸೋತು ಕಂಗೆಟ್ಟಿದ್ದ ಚಿತ್ರರಂಗಕ್ಕೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಗೆಲುವಿನ ಸಿಹಿ ನೀಡುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ. ವರುಣ್ ಗೌಡ ನಿರ್ಮಿಸಿ, ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಅನೇಕ ಯುವ ಕಲಾವಿದರ ದಂಡು ಚಿತ್ರದಲ್ಲಿದೆ.
ಹಾಸ್ಟೆಲ್ ಹುಡುಗರು ಮೂರನೇ ವಾರ ಮುಗಿಸಿ ಮುನ್ನೆಡೆಯುತ್ತಿರುವ ಸಮಯದಲ್ಲಿ ತೆಲುಗಿನಲ್ಲಿ ಡಬ್ ಆಗಲು ಸಜ್ಜಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ವರುಣ್ ಗೌಡ, ಪ್ರತಿಷ್ಠಿತ ಕಂಪನಿಯ ಜೊತೆ ಮಾತುಕತೆ ನಡೆಯುತ್ತಿದೆ ಸದ್ಯದಲ್ಲಿಯೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಇನ್ನು ಎರಡು ಟಕೆಟ್ ಬುಕ್ ಮಾಡಿದರೆ ಮೂರನೇ ಟಿಕೆಟ್ ಉಚಿತವಾಗಿ ಪ್ರೇಕ್ಷಕರಿಗೆ ಸಿಗಲಿದೆ. ಈ ಮೂಲಕ ಚಿತ್ರಮಂದಿಕ್ಕೆ ಪ್ರೇಕ್ಷಕರನ್ನು ಕರೆತರುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಚಿತ್ರ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳುತ್ತೇವೆ. ಹೊಸ ತಂಡಕ್ಕೆ ಗೆಲುವು ಸಿಕ್ಕಿರುವುದು ಖುಷಿಯ ವಿಚಾರ ಎಂದರು.