ತೆಲುಗಿಗೆ ಮಾನ್ವಿತಾ ಪ್ರವೇಶ

ಬೆಂಗಳೂರು,‌ಮಾ.20- ಕನ್ನಡದಿಂದ ಪರಭಾಷೆಗೆ ಒಬ್ಬೊಬ್ಬರೇ ಕಲಾವಿದರು ತೆರಳುತ್ತಿದ್ದಾರೆ ಇದೀಗ ಮತ್ತೊಬ್ಬ ನಟಿ ಮಾನ್ವಿತಾ ಕಾಮತ್ ಕೂಡ ಸೇರ್ಪಡೆಯಾಗಿದ್ದಾರೆ.

ರಶ್ಮಿಕಾ ಮಂದಣ್ಣ, ನಬಾ ನಟೇಶ್, ರಚಿತಾ ರಾಮ್, ಶ್ರೀಲೀಲಾ, ಕೃತಿ ಶೆಟ್ಟಿ, ನೇಹಾ ಶೆಟ್ಟಿ ಬಳಿಕ ಮಾನ್ವಿತಾ ಕಾಮತ್ ತೆಲುಗು ಸಿನಿಮಾರಂಗ ಪ್ರವೇಶಿಸಿದ್ದಾರೆ
ಮಾನ್ವಿತಾ ತೆಲುಗು ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ.

ಮಾನ್ವಿತಾ ತೆಲುಗಿನ ಚೊಚ್ಚಲ ಸಿನಿಮಾಗೆ ಸಹಿ ಮಾಡಿದ್ದು, ಈಗಾಗಲೇ ಹೊಸ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.

ಈ ವಿಷಯವನ್ನು ಸ್ವತಃ ಮಾನ್ವಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ .  ಜೊತೆಗೆ ಚಿತ್ರದ ಮುಹೂರ್ತದ ಫೋಟೋವನ್ನು ಹಂಚಿಕೊಂಡು ಮಾನ್ವಿತಾ ಸಂತಸ ವ್ಯಕ್ತಪಡಿಸಿದ್ದಾರೆ.