ತೆಲಗಾಣ ರಾಜ್ಯದಲ್ಲಿ ಬಿಜೆಪಿ ವೀಕ್ಷಕರಾಗಿ ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣರಾಜು ನಿಯೋಜನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.10- ಲೋಕಸಭಾ ಚುನಾವಣೆ ಮೂರನೇ ಹಂತದ ಚುನಾವಣಾ ಪ್ರಚಾರ ದಕ್ಷಿಣ ರಾಜ್ಯಗಳಲಿ ಭರ್ಜರಿಯಾಗಿ ನಡೆಯುತ್ತಿದ್ದು, ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು ಅವರನ್ನು ತೆಲಗಾಣ ರಾಜ್ಯದ ಚುನಾವಣೆ ವೀಕ್ಷಕರನ್ನಾಗಿ ನೇಮಕ ಮಾಡಿ, ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ.
ಹೀಗಾಗಿ ಕಳೆದ 10 ದಿನಗಳಿಂದಲು ನಿಜಗುಣರಾಜು ಅವರು ತೆಲಗಾಣ ರಾಜ್ಯದ ಹೈದಾರಬಾದ್ ಮತ್ತು ಸಿಂಕದರರಾದ್ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಪಟ್ಟಣ ಹಾಗೂ ಹಳ್ಳಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಕುರಿತು ಜನರಿಗೆ ತಿಳಿಸುವ ಜೊತೆಗೆ ಬಿಜೆಪಿ ಅಭ್ಯರ್ಥಿಗಳಾದ ಮಾಧವಿ ಲತಾ ಅವರ ಪರವಾಗಿ ಕ್ಯಾಂಪೇನ್ ಮಾಡಿದ್ದಾರೆ.
ಚುನಾವಣೆ ಪ್ರಚಾರ ಸಭೆಯಲ್ಲಿ ಕೇಂದ್ರದ ಸಚಿವ ಕಿಸಾನ್‍ರೆಡ್ಡಿ ಅವರು ಸಹ ಇದ್ದಾರೆ. ಬಿಜೆಪಿ ಪಕ್ಷದ ಪ್ರಮುಖ ಪದಾಧಿಕಾರಿಗಳೊಂದಿಗೆ ಚುನಾವಣಾ ಪ್ರಚಾರದಲ್ಲಿರುವ ನಿಜಗುಣರಾಜು ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಗಳಾಗವುದು ಗ್ಯಾರಂಟಿ. ಹೀಗಾಗಿ ಅವರ ಯೋಜನೆಗಳ ಬಗ್ಗೆ ಜನರು ಹೆಚ್ಚು ಜಾಗೃತರಾಗಬೇಕು. ಈಗಾಗಲೇ ವಿಕಸಿತ ಭಾರತ ಕಾರ್ಯಕ್ರಮಗಳ ಮೂಲಕ ಪ್ರತಿ ಮನೆಮನೆಗೆ ಮೋದಿ ಅವರ ಕಾರ್ಯಕ್ರಮಗಳು ತಲುಪಿವೆ. ಇನ್ನು ಹೆಚ್ಚಿನ ರೀತಿಯಲ್ಲಿ ದೇಶವನ್ನು ಅಭಿವೃದ್ದಿಪಡಿಸಲು ತೆಲಗಾಣ ರಾಜ್ಯದ ಪ್ರಜೆಗಳು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ನಿಜಗುಣರಾಜು ಮನವಿ ಮಾಡಿದರು.