ತೆಲಂಗಾಣ ಶಾಸಕ ಟಿ. ರಾಜಾಸಿಂಗ್ ಹಂಪಿ ಭೇಟಿ.


ಸಂಜೆವಾಣಿ ವಾರ್ತೆ
ಹೊಸಪೇಟೆ ನ24: ವಿಶ್ವವಿಖ್ಯಾತ ಹಂಪಿಗೆ ತೆಲಂಗಾಣ ಶಾಸಕ ಟಿ.ರಾಜಾಸಿಂಗ್ ಬುಧುವಾರ ಭೇಟಿ ನೀಡಿದರು ವಿರೂಪಾಕ್ಷೇಶ್ವರ ಪಂಪಾದೇವಿಯ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದರು.
ಆನೆಗುಂದಿಯ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡಿದ ಅವರು ನಂತರ ಹಂಪಿಗೆ ಆಗಮಿಸಿ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ ಅವರು ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಗದೀಶ ಕಮಟಗಿ ಸೇರಿದಂತೆ ಇತರರು ಹಾಜರಿದ್ದರು.