ತೆಲಂಗಾಣ ಮಾದರಿಯಲ್ಲಿ ನಿಗದಿತ ವೇಳೆಯಲ್ಲಿ ವಹಿವಾಟಿಗೆ ಅವಕಾಶ ಕೊಡಿ; ಸರ್ಕಾರಕ್ಕೆ ವಾಣಿಜ್ಯೋದ್ಯಮ ಸಂಘ ಮನವಿ

ಯಾದಗಿರಿ : ಮೇ.27:ರಾಜ್ಯ ಲಾಕಡೌನ್ ಸಂಧರ್ಭದಲ್ಲಿ ಪ್ರತಿನಿತ್ಯ ನಿಗದಿತ ಸಮಯದವರೆಗೆ ಎಲ್ಲಾ ವ್ಯಾಪಾರ ವಹಿವಟು ನಡೆಸಲು ತೆಲಂಗಾಣ ಮಾದರಿಯಲ್ಲಿ ಅವಕಾಶ ಕೋಡಿಸಬೇಕೆಂದು ಮತ್ತು ಎಮ್.ಎಸ್.ಎಮ್.ಇ ಗಳಿಗೆ ವಿಶೇಷ
ಪ್ಯಾಕೇಜ ಘೊಷಿಸುವವಂತೆ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಮನವಿ ಮಾಡಿದೆ.
ಈ ಕುರಿತು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಮನವಿಗಳು ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಸಮಸ್ಯೆ ವಿವರಿಸಿದ್ದು ಹೀಗೆ;
ದಿನಾಂಕ 23-04-2021 ರಂದು ನಮ್ಮ ರಾಜ್ಯದಲ್ಲಿ ಲಾಕಡೌನ್ ವಿಧಿಸಲಾಯಿತು. ಲಾಕಡೌನ್‍ನಿಂದ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ಅದರಲ್ಲೂ ಹತ್ತಿ ಕಾರ್ಖಾನೆ, ಜವಳಿ ಮತ್ತು ಬಂಗಾರ ಹೀಗೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವಹಿವಾಟನ್ನು ಸ್ಥಗಿತವಾದುದರಿಂದ ನಿತ್ಯ ಜೀವನ ನಡೆಸುವುದು ತುಂಬ ಕಷ್ಠವಾಗಿದೆ, ಕಳೆದ ವರ್ಷದಲ್ಲಿ ಈ ತಿಂಗಳುಗಳಲ್ಲಿ ಲಾಕಡೌನ್ ಆದಾಗ ಸಣ್ಣ ಪುಟ್ಟ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆಯಲಾಗದೆ ಅನುಭವಿಸಿದ ಕಷ್ಟಗಳಿಂದ ಚೆತರಿಸಿಕೊಳಲ್ಲು ಇನ್ನು ಸಾದ್ಯವಾಗಿಲ್ಲ, ವ್ಯಾಪಾರಸ್ಥರ ಶೋಚನೀಯ ಪರಿಸ್ಥಿತಿ ಎಂಥದ್ದು ಎಂದು ತಮಗೂ ತಿಳಿದಿದೆ.
ವರ್ಷದಲ್ಲಿ ಪ್ರಮುಖವಾಗಿ ಮಾರ್ಚ ತಿಂಗಳಿಂದ ಜೂನ್ ತಿಂಗಳ ವರೆಗೆ ಒಟ್ಟು 4 ತಿಂಗಳುಗಳು ಜವಳಿ, ಬೆಳ್ಳಿಬಂಗಾರ, ಸ್ಟಿಲ್ ಪಾತ್ರೆಗಳ, ಫರ್ನಿಚರ್ ಮತ್ತು ಜನರಲ್ ಸಾಮಾನುಗಳು ವ್ಯಾಪಾರವಾಗುವ ದಿನಗಳಾಗಿರುತ್ತವೆ, ಈ ತಿಂಗಳುಗಳಲ್ಲಿ ಮದುವೆ, ಉಪನಯನ, ಗೃಹಪ್ರವೇಶ ಮುಂತಾದ ಶುಭಕಾರ್ಯಕ್ರಮಗಳು ಇರುವುದರಿಂದ ನಾಗರಿಕರು ಖರೀದಿಗಾಗಿ ಅಂಗಡಿಗಳಿಗೆ ಬರುತ್ತಾರೆ.
ಆದರೆ ತಾವುಗಳು ರಾಜ್ಯ ಲಾಕಡೌನ್ ಮಾಡಿರುವುದರಿಂದ ವ್ಯವಹಾರ ಮಾಡಲು ಆಗುವುದಿಲ್ಲ, ಆದರು ಸಹ ಎಲ್ಲ ವರ್ತಕರು ತಮ್ಮ ಕೇಲಸಗಾರರಿಗೆ ಸಂಬಳ ಕೋಡಬೇಕು, ಮಳಿಗೆಯ ಬಾಡಿಗೆ ಕಟ್ಟಬೇಕು ಬ್ಯಾಂಕಿಗೆ ಕಂತು ಹಾಗು ಬಡ್ಡಿಯನ್ನು ಕಟ್ಟಬೇಕು ಮತ್ತು ಮನೆಯ ಖರ್ಚುವೆಚ್ಛವನ್ನು ಭರಿಸುವುದು ವ್ಯಾಪಾರಸ್ಥರಿಗೆ ಸಾಧ್ಯವಾಗುವುದಿಲ್ಲ. ಮಧ್ಯಮ ವರ್ಗದವರಾದ ಸಣ್ಣಪುಟ್ಟ ವರ್ತಕರಿಗೆ ಸರ್ಕಾರದಿಂದಾಗಲಿ ಅಥವ ಬ್ಯಾಂಕುಗಳಿಂದಾಗಲಿ ಯಾವುದೆ ರೀತಿಯ ರಿಯಾಯಿತಿಯಾಗಲಿ ಅನುಕೂಲಗಳಾಗಲಿ ಇಲ್ಲ.
ಅತಿ ಹಿಂದುಳಿದ ಯಾದಗಿರಿ ಜಿಲ್ಲೆಯ ಸಣ್ಣ ಕೈಗಾರಿಕೆಗಳ ಉಳಿವಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್‍ನ್ನು ಸಣ್ಣ ಕೈಗಾರಿಕೆಗಳಿಗೆ ಘೊಷಿಸಲು ವಿನಂತಿಸುತ್ತೆವೆ. ವಿಶೇಷವಾಗಿ ಎಪ್ರಿಲ್, ಮೇ ಹಾಗು ಜೂನ್ 2021ರ ನಿಗದಿತ ಮಾಸಿಕ ವಿದ್ಯುತ್ತ ಶುಲ್ಕಗಳು ಮತ್ತು ವಿದ್ಯುತ್ ತೆರಿಗೆಯನ್ನು ಸಂಪೂರ್ಣ ಮನ್ನ ಮಾಡಲು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ. ಸ್ಥಳಿಯ ಸಂಸ್ಥೆಗಳ ಆಸ್ಥಿ ತೆರಿಗೆಯನ್ನು ಪಾವತಿಸುವುದು ಮಾರ್ಚ 2022ರ ವರೆಗೆ ಮನ್ನಾ ಮಾಡಲು ವಿನಂತಿಸುತ್ತೆವೆ.
ತಾವುಗಳು ದಯವಿಟ್ಟು ಮೇಲೆ ತಿಳಿಸಿರುವ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವರ್ತಕರ ಮತ್ತು ಕೈಗಾರಿಕೆಗಳ ಶೊಚನೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತೆಲಂಗಾಣ ಮಾದರಿಯಲ್ಲಿ ದಿನಾಲು ಬೆಳ್ಳಿಗೆ 6 ರಿಂದ 10 ರ ವರೆಗೆ ಎಲ್ಲಾ ವರ್ತಕರಿಗೆ ಕೋವೀಡ್-19 ನಿಯಮಗಳನ್ನು ಪಾಲಿಸುತ್ತ ವ್ಯವಹರಿಸಲು ಅವಕಾಶ ಮಾಡಿಕೊಡಬೇಕೆಂದು ತಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತಿದ್ದೆವೆ.
ತಾವು ನಮ್ಮ ಕೋರಿಕೆಗೆ ತಕ್ಷಣ ಸ್ಪಂಧಿಸಿ ಸೂಕ್ತ ಅನುಕೂಲ ಮಾಡಿಕೋಡುವಿರೆಂದು ನಂಬಿರುತ್ತೇವೆ ಎಂದು ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ಹನುಮಾನದಾಸ ಮುಂದಡ, ಉಪಾಧ್ಯಕ್ಷ ವಿಷ್ಣುಕುಮಾರ ವ್ಯಾಸ, ಕಾರ್ಯಕಾರಿಣಿ ಸದಸ್ಯ ಶಾಮಸುಂದರ ಬಟ್ಟಡ, ಸುರೇಶ ಬಾಡದ, ವಿಜಯಕುಮಾರ ದಿಗ್ಗಾಯಿ ಇದ್ದರು.