
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.02: ತೆಲಂಗಾಣದ ಒರಂಗಲ್ ಜಿಲ್ಲೆಯ ಕಾಕತಿಯ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕ ವ್ಯಾಸಂಗ ಮಾಡುತ್ತಿದ್ದ ಡಾ.ಧರಾವತ್ ಪ್ರೀತಿ ಎಂಬ ವಿದ್ಯಾರ್ಥಿನಿಯ ಮೇಲೆ ಱ್ಯಾಗಿಂಗ್ ನಡೆದಿದ್ದು, ವಿದ್ಯಾರ್ಥಿನಿಯು ಆತ್ಮಹತ್ಯೆಗೆ ಯತ್ನಿಸಿ, 26 ಮಾರ್ಚ್ ರಂದು ಸಾವನ್ನಾಪ್ಪಿದ್ದಾರೆ. ಈ ವಿದ್ಯಾರ್ಥಿನಿ ಸಾವಿಗೆ ನಗರದ ವಿಮ್ಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಂತಾಪ ಸಭೆ ನಡೆದು
ಡಾ.ಪ್ರೀತಿ ಸಾವಿನ ಬಗ್ಗೆ ತಕ್ಷಣವೇ ಕೂಲಂಕುಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಲಾಯಿತು. ಕಾಲೇಜಿನಲ್ಲಿ ಱ್ಯಾಗಿಂಗ್ ಮತ್ತು ಪ್ರಾಬಲ್ಯ ಪ್ರವೃತ್ತಿಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಕಾಲೇಜು ಆಡಳಿತ ಮಂಡಳಿ ಮತ್ತು ಸರ್ಕಾರ ಈ ಸಾವಿನ ಹೊಣೆ ಹೊತ್ತು ಈ ತರಹದ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು.
ವೈದ್ಯಕೀಯ ಹಾಸ್ಟೆಲ್ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಶೈಕ್ಷಣಿಕ ವಾತಾವರಣವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ರವಿಕಿರಣ್.,ಜೆ.ಪಿ, ಉಪಾಧ್ಯಕ್ಷರು ಕೆ.ಈರಣ್ಣ, ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.