ತೆಲಂಗಾಣದಲ್ಲಿ ಶಾಲಾ-ಕಾಲೇಜು ಆರಂಭ

ತೆಲಂಗಾಣ,ನ ೨- ಕೊರೋನಾ ಮಹಾಮಾರಿ ಹಿನ್ನೆಲೆ ಕಳೆದ ಆರೇಳು ತಿಂಗಳಿನಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳನ್ನು ತೆರೆಯಲು ದೇಶದ ಹಲವು ರಾಜ್ಯಗಳು ಸಿದ್ದತೆ ನಡೆಸುತ್ತಿದ್ದು ಈ ನಡುವೆ ಇಂದಿನಿಂದ ತೆಲಂಗಾಣದಲ್ಲಿ ಶಾಲಾ-ಕಾಲೇಜು ಆರಂಭವಾಗಲಿವೆ.

ಕೇಂದ್ರ ಸರ್ಕಾರ ಅನ್ ಲಾಕ್ ೫.೦ ಮಾರ್ಗಸೂಚಿಯಂತೆ ಶಾಲಾ-ಕಾಲೇಜು ಆರಂಭದ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿತ್ತು. ಇದೀಗ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತೆಲಂಗಾಣ ಸರ್ಕಾರ ಇಂದಿನಿಂದ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡಿದೆ.

ಇಂದಿನಿಂದ ೯, ೧೦ ಹಾಗೂ ದ್ವಿತೀಯ ಪಿಯು ಕಾಲೇಜುಗಳು ಆರಂಭವಾಗಲಿದೆ. ನ.೧೬ರಿಂದ ಪ್ರಥಮ ಪಿಯು ತರಗತಿ ಶುರುವಾಗಲಿದ್ದುಮ ನವೆಂಬರ್.೨೩ರಿಂದ ೬, ೭, ೮ನೇ ತರಗತಿ ಪ್ರಾರಂಭವಾಗಲಿದೆ. ಡಿಸೆಂಬರ್ ೧೪ ರಿಂದ ೧ ರಿಂದ ೫ನೇ ತರಗತಿ ಆರಂಭವಾಗಲಿದೆ.

ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಶಾಲೆಗೆ ಆಗಮಿಸುವಂತಿಲ್ಲ. ಪ್ರತಿ ಶಾಲೆಯ ಆಡಳಿತ ಮಂಡಳಿ ಬೆಳಗ್ಗೆ ಮತ್ತು ಮಧ್ಯಾಹ್ನ ಎಂದು ಎರಡು ತಂಡಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವಂತೆ ನೋಡಕೊಳ್ಳಬೇಕು ಸೂಚನೆ ನೀಡಲಾಗಿದೆ.

ಇನ್ನು ಕೊರೋನ ಕಾರಣಕ್ಕಾಗಿ ಏಳು ತಿಂಗಳ ಬಳಿಕ ಅಸ್ಸಾಂನಲ್ಲಿ ಶಾಲೆಗಳನ್ನು ಸೋಮವಾರದಿಂದ ತೆರೆಯಲಾಗಿದೆ. ೬ ರಿಂದ ೧೨ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಬಹುದಾಗಿದೆ. ಕೊರೋನ ಸೋಂಕು ಹರಡುವಿಕೆ ತಡೆಯಲು ಶಾಲೆಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.